- Advertisement -
- Advertisement -





ಬೆಂಗಳೂರು: ಖಾತೆ ವಿಚಾರಕ್ಕೆ ಬೇಸರಗೊಂಡಿದ್ದ ಸಚಿವ ಕೃಷ್ಣ ಬೈರೇಗೌಡ ತಣ್ಣಗಾಗಿದ್ದು, ಬೆಂಗಳೂರು ಅಭಿವೃದ್ಧಿ ಖಾತೆ ಸಚಿವರಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ.
ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿ ಕೃಷ್ಣಬೈರೇಗೌಡ ಅವರು ಇಂದು ಜಿಬಿಎ ಕೇಂದ್ರ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದ್ದಾರೆ. ಬಳಿಕ ಐದು ಜಿಬಿಎ ಆಯುಕ್ತರ ಜೊತೆ ಸಭೆ ನಡೆಸಿದರು. ಜಿಬಿಎಯಲ್ಲಿ ಆಗುತ್ತಿರುವ ಪ್ರಗತಿ ಮತ್ತು ಯೋಜನೆಗಳ ಬಗ್ಗೆ ಚರ್ಚೆ ಆಯುಕ್ತರ ಸಭೆಯಲ್ಲಿ ಚರ್ಚಿಸಿದರು.
ಸಭೆಯಲ್ಲಿ ಅಧಿಕಾರಿಗಳಿಗೆ ಸಚಿವರು ಕ್ಲಾಸ್ ತೆಗೆದುಕೊಂಡರು. ರಸ್ತೆ ಗುಂಡಿಗಳು ಬೀಳುತ್ತಿವೆ. ನಿಮಗೆ ಗುಂಡಿಯಲ್ಲದ ರಸ್ತೆ ಮಾಡೋಕೆ ಆಗಲ್ವಾ? ಒಂದು ಕಡೆ ರಸ್ತೆ ಮಾಡ್ತೀರಾ, ಮತ್ತೊಂದು ಕಡೆ ಗುಂಡಿ ಬೀಳುತ್ತೆ ಯಾಕೆ? ಬೇರೆ ರಾಜ್ಯದಲ್ಲಿ ಈ ಸಮಸ್ಯೆ ಇಲ್ಲ, ಬೆಂಗಳೂರಲ್ಲಿ ಯಾಕೆ? ಬೆಂಗಳೂರು ಅಂದರೆ ಗುಂಡಿ ಯಾಕೆ ಎಂದು ತರಾಟೆಗೆ ತೆಗೆದುಕೊಂಡರು ಎಂಬುದಾಗಿ ಮೂಲಗಳಿಂದ ತಿಳಿದುಬಂದಿದೆ.
- Advertisement -








