ವರದಿ: ನ್ಯೂಸ್ ಡೆಸ್ಕ್, ವಿ ಟಿವಿ
ಬೆಂಗಳೂರು: ಬೆಂಗಳೂರಲ್ಲಿ ಕೊರೊನಾ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಆದರೆ ಈವರೆಗೆ 7 ಮಂದಿ ಪೊಲೀಸ್ ಸಿಬ್ಬಂದಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ ಎಂದು ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಟ್ವೀಟ್ ಮಾಡಿದ್ದಾರೆ.
Hanumana never craved for validation of his devotion for Rama
— Hemant Nimbalkar IPS (@IPSHemant) July 18, 2020
So is @BlrCityPolice on the roads fighting #COVID19 with devotion for Bengaluru
Proud of being member of this awesome force who has forgotten family, kids & life in this fight against #Corona
Be Home & Stay Safe? pic.twitter.com/qbizqYUPrR
ಇಲ್ಲಿಯ ತನಕ 756 ಮಂದಿಗೆ ಸೋಂಕು ತಗುಲಿದೆ. ಈವರೆಗೆ 499 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಇನ್ನುಳಿದಂತೆ 256 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 807 ಮಂದಿ ಸಿಬ್ಬಂದಿ ಕ್ವಾರಂಟೈನ್ ಗೆ ಒಳಗಾಗಿದ್ದಾರೆ. 7 ಪೊಲೀಸ್ ಠಾಣೆಗಳು ಸೀಲ್ ಡೌನ್ ಆಗಿವೆ ಎಂದು ಮಾಹಿತಿ ನೀಡಿದ್ದಾರೆ.
ರಸ್ತೆಗಿಳಿದು ಪೊಲೀಸರಿಂದ ಭಕ್ತಿಯಿಂದ ಸೇವೆ:
ಹನುಮ ಯಾವತ್ತೂ ರಾಮನ ಮೇಲಿನ ತನ್ನ ಭಕ್ತಿಗೆ ಪ್ರಮಾಣೀಕರಣಕ್ಕಾಗಿ ಹಂಬಲಿಸಲಿಲ್ಲ. ಅದೇ ರೀತಿ ಬೆಂಗಳೂರಲ್ಲಿ ಪೊಲೀಸರು ಭಕ್ತಿಯಿಂದ ಕೆಲಸ ನಿರ್ವಹಿಸುತ್ತಿದ್ದಾರೆ. ಹೆಂಡತಿ, ಮಕ್ಕಳು, ಕುಟುಂಬಸ್ಥರನ್ನು ಮರೆತು ಕೊರೊನಾ ವಿರುದ್ಧ ಹೋರಾಡುತ್ತಿರುವ ಇಂತಹ ಇಲಾಖೆಯ ಭಾಗವಾಗಿರುವುದಕ್ಕೆ ನನಗೆ ಹೆಮ್ಮೆಯಿದೆ ಎಂದು ಟ್ವೀಟ್ ಮಾಡಿದ್ದಾರೆ.