- Advertisement -
- Advertisement -
ಬೆಂಗಳೂರು: ಹೆಬ್ಬಾಳ ಪೊಲೀಸ್ ಠಾಣೆ ಸಮೀಪ ಕೆಳಸೇತುವೆ ಬಳಿ ಕಾರು- ಲಾರಿ-ಬೈಕ್ ನಡುವೆ ಸರಣಿ ಅಪಘಾತ ಸಂಭವಿಸಿದ್ದು. ರಸ್ತೆ ದಾಟುತ್ತಿದ್ದ 12 ವರ್ಷದ ಶಾಲಾ ಬಾಲಕಿ ಅಕ್ಷಯ ಬಿ.ನರಸಿಂಹಮೂರ್ತಿ ಮೃತಪಟ್ಟಿದ್ದಾಳೆ.
ಸ್ಟೆಲ್ಲಾ ಮೇರಿಸ್ ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದು ಇಂದು ಶಾಲೆ ಮುಗಿದ ಬಳಿಕ ಮನೆಗೆ ಹೋಗುವಾಗ ಬಿಬಿಎಂಪಿ ಕಸದ ಲಾರಿ ಆಕೆ ಮೇಲೆ ಹರಿದಿದೆ. ರಸ್ತೆ ದಾಟಲು ನಿಂತಿದ್ದವರಿಗೂ ಲಾರಿ ಡಿಕ್ಕಿಯಾಗಿದೆ.
ಅಂಡರ್ ಪಾಸ್ನಲ್ಲಿ ನೀರು ನಿಂತಿರುವ ಕಾರಣ ಅಂಡರ್ ಪಾಸ್ ಬಳಸದೆ ಬಾಲಕಿ ಮತ್ತು ಜನರು ರಸ್ತೆ ದಾಟುತ್ತಿದ್ದರು. ಈ ವೇಳೆ ಸರಣಿ ಅಪಘಾತ ಸಂಭವಿಸಿದೆ. ಗಾಯಗೊಂಡ ಇಬ್ಬರನ್ನು ಆಸ್ಪತ್ರೆಗೆ ರವಾನಿಸಲಾಗಿದೆ.
- Advertisement -