Saturday, April 27, 2024
spot_imgspot_img
spot_imgspot_img

10ಕ್ಕೂ ಹೆಚ್ಚು ಕೆಲಸಗಾರರಿರೋ ಸಂಸ್ಥೆಗಳಿಗೆ ದಿನದ 24 ಗಂಟೆಯೂ ತೆರೆಯಲು ಅನುಮತಿ!

- Advertisement -G L Acharya panikkar
- Advertisement -

ಬೆಂಗಳೂರು: ಕರ್ನಾಟಕ ಶಾಪ್ಸ್ ಆ್ಯಂಡ್​ ಎಸ್ಟಾಬ್ಲಿಷ್​​ಮೆಂಟ್​​ ಕಾಯ್ದೆ ( 1961 ) ಯಲ್ಲಿ ಮಹತ್ವದ ತಿದ್ದುಪಡಿ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ನೂತನ ತಿದ್ದಿಪಡಿಯಲ್ಲಿ ಹೋಟೆಲ್, ರೆಸ್ಟೋರೆಂಟ್​​,ಮಾಲ್, ಒಡವೆ ಅಂಗಡಿಗಳು, ಸೂಪರ್ ಮಾರ್ಕೆಟ್ ಸೇರಿದಂತೆ ಹತ್ತಕ್ಕಿಂತ ಹೆಚ್ಚು ಕೆಲಸಗಾರರಿರೋ ಸಂಸ್ಥೆಗೆ ದಿನದ 24 ಗಂಟೆಗಳ ಕಾಲ ತೆರೆಯಲು ಅನುಮತಿ ನೀಡಿದೆ.

ಕೆಲವೊಂದು ಪ್ರಮುಖ ತಿದ್ದುಪಡಿಯನ್ನು ಮಾಡಿ ಈ ಆದೇಶ ಹೊರಡಿಸಿದೆ. ಮಹಿಳಾ ಕಾರ್ಮಿಕರಿಗೆ ರಾತ್ರಿ ಪಾಳಿ ಮಾಡುವಂತೆ ಒತ್ತಾಯ ಮಾಡುವಂತಿಲ್ಲ.ರಾತ್ರಿ 8 ಗಂಟೆ ನಂತರ ಮಹಿಳಾ ನೌಕರರನ್ನು ಕೆಲಸದಿಂದ ವಿಮುಕ್ತಿಗೊಳಿಸಬೇಕು.ಮಹಿಳಾ ನೌಕರರ ಒಪ್ಪಿಗೆ ( ರಿಟನ್ ) ಪಡೆದು ರಾತ್ರಿ 8 ಗಂಟೆ ನಂತರ ಕೆಲಸ ಮಾಡಿಸಬಹುದು.

ರಾತ್ರಿ ಪಾಳಿ ಮಾಡೋ ಮಹಿಳೆಯರಿಗೆ ಪಿಕಪ್ ಡ್ರಾಪ್ ವ್ಯವಸ್ಥೆ ಕಡ್ಡಾಯ.ನಿಯಮ ತಪ್ಪಿದಲ್ಲಿ ಸಂಸ್ಥೆ ವ್ಯವಸ್ಥಾಪಕ‌ ಮತ್ತು ಮಾಲೀಕರ ಮೇಲೆ ಕಠಿಣ ಕ್ರಮ.ಇವು 24 ಗಂಟೆಯು ಕರ್ತವ್ಯ ನಿರ್ವಹಿಸುವ ಅಂಗಡಿಗಳು ಪಾಲಿಸಬೇಕಾದ ನಿಯಮಗಳಾಗಿವೆ.

- Advertisement -

Related news

error: Content is protected !!