Sunday, July 26, 2026
spot_imgspot_img
spot_imgspot_img

ನ್ಯಾಯಾಧೀಶರಿಗೆ ಬಾಂಬ್ ಬೆದರಿಕೆ ಪ್ರಕರಣ- ವಿಶೇಷ ತನಿಖಾ ತಂಡ ರಚನೆ

- Advertisement -
- Advertisement -


ಬೆಂಗಳೂರು (ಅ.20) : ಮಾದಕ ದ್ರವ್ಯ ಹಗರಣದಲ್ಲಿ ಬಂಧಿತರಾಗಿರುವ ರಾಗಿಣಿ ದ್ವಿವೇದಿ ಮತ್ತು ಸಂಜನಾ ಅವರಿಗೆ ಜಾಮೀನು ನೀಡಬೇಕು. ಇಲ್ಲದಿದ್ದರೆ ಹತ್ಯೆ ಮಾಡಲಾಗುವುದು ಎಂಬ ಬೆದರಿಕೆ ಪತ್ರ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ವಿಶೇಷ ತನಿಖಾ ತಂಡ ರಚಿಸಲಾಗಿದೆ.

ಈ ಕುರಿತು ವಿಚಾರಣೆ ನಡೆಸುತ್ತಿರುವ ನ್ಯಾಯಾಧೀಶ ಸೀನಪ್ಪ ಅವರಿಗೆ ಬೆದರಿಕೆ ಪತ್ರ ಬಂದಿತ್ತು. ಸ್ಫೋಟಕ ವಸ್ತು ಒಳಗೊಂಡ ಪಾರ್ಸೆಲ್ ಅವರ ಹೆಸರಿಗೆ ಬಂದಿತ್ತು. ಹಿರಿಯ ಪೊಲೀಸ್ ಅಧಿಕಾರಿಗಳಾದ ಕಮಲ್ ಪಂತ್, ಸಂದೀಪ್ ಪಾಟೀಲ್ ಸೇರಿದಂತೆ ಹಲವು ಅಧಿಕಾರಿಗಳಿಗೆ ಕೂಡ ಬೆದರಿಕೆ ಪತ್ರ ಬಂದಿದೆ.

ಕೆ ಜಿ ಹಳ್ಳಿ ಮತ್ತು ಡಿ ಜೆ ಹಳ್ಳಿ ಪ್ರಕರಣದಲ್ಲಿ ಬಂಧಿತರಾಗಿರುವವರಿಗೆ ಕೂಡ ಜಾಮೀನು ನೀಡಬೇಕು ಎಂದು ಕಿಡಿಗೇಡಿ ಪತ್ರದಲ್ಲಿ ಒತ್ತಾಯಿಸಿದ್ದಾನೆ. ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಚೀಳೂರು ಗ್ರಾಮದಿಂದ ಈ ಪತ್ರ ಬಂದಿದೆ ಎಂದು ವರದಿಯಾಗಿದೆ.

- Advertisement -

Related news

error: Content is protected !!