Sunday, May 5, 2024
spot_imgspot_img
spot_imgspot_img

ಯಡಿಯೂರಪ್ಪ 1250 ಕೋಟಿ ರೂಪಾಯಿ ಲಾಕ್‌ಡೌನ್ ವಿಶೇಷ ಪ್ಯಾಕೇಜ್ ಘೋಷಣೆ!

- Advertisement -G L Acharya panikkar
- Advertisement -

ಬೆಂಗಳೂರು: ಕೋವಿಡ್ 19 ಸೋಂಕು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಲಾಕ್ ಡೌನ್ ಘೋಷಣೆ ಮಾಡಲಾಗಿದ್ದು, ಹಿರಿಯ ಸಚಿವರೊಂದಿಗೆ ಸಭೆ ಮುಗಿಸಿ ಸುದ್ದಿಗೋಷ್ಟಿ ನಡೆಸಿದ ಸಿಎಂ ಯಡಿಯೂರಪ್ಪ 1,250 ಕೋಟಿ ರೂ. ವಿಶೇಷ ಆರ್ಥಿಕ ನೆರವನ್ನು ಘೋಷಿಸಿದ್ದಾರೆ. ಇದರಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಬಡವರಿಗೆ ರಾಜ್ಯಸರ್ಕಾರ 1,250 ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ.

ಯಡಿಯೂರಪ್ಪ 1250 ಕೋಟಿ ರೂಪಾಯಿ ಲಾಕ್‌ಡೌನ್ ವಿಶೇಷ ಪ್ಯಾಕೇಜ್ ಘೋಷಣೆ: ಪ್ರತಿ ಹೆಕ್ಟೇರ್ ಹೂವು ಬೆಳೆ ಹಾನಿಗೆ 10000 ಪರಿಹಾರ ಧನ
ಕಟ್ಟಡ ಕಾರ್ಮಿಕರಿಗೆ 3000 ಸಹಾಯಧನ
ತರಕಾರಿ ಹಣ್ಣು ಬೆಳೆಗಾರರಿಗೆ 10000 ಸಹಾಯಧನ

ಆಟೋ ಚಾಲಕ, ಟ್ಯಾಕ್ಸಿ ಕ್ಯಾಬ್ ಚಾಲಕರಿಗೆ 3000 ಸಹಾಯಧನ
ಅಸಂಘಟಿತ ಕಾರ್ಮಿಕರಿಗೆ 2000 ಸಹಾಯ ಧನ
ರಸ್ತೆ ಬದಿ ವ್ಯಾಪರಸ್ಥರಿಗೆ 2000 ಸಹಾಯಧನ
ಕಲಾವಿದರಿಗೆ, ಕಲಾ ತಂಡಗಳಿಗೆ 3000 ಸಹಾಯಧನ
ರೇಶನ್ ಅರ್ಜಿ ಸಲ್ಲಿಸಿದವರಿಗೂ ಉಚಿತ ಅಕ್ಕಿ ವಿತರಣೆ ಬಿಪಿಯಲ್ ಕಾರ್ಡುದಾರರಿಗೆ ತಲಾ 10 ಕೆಜಿ ಅಕ್ಕಿ ವಿತರಣೆ
ಎಪಿಎಲ್ ಕಾರ್ಡುದಾರರಿಗೆ ತಲಾ 5 ಕೆಜಿ ಅಕ್ಕಿ ವಿತರಣೆ

ಇಂದಿರಾ ಕ್ಯಾಂಟಿನ್‌ನಲ್ಲಿ ಉಚಿತ ಊಟ ಪ್ರತಿ ಗ್ರಾಮಕ್ಕೆ ಎಸ್.ಡಿ.ಆರ್.ಎಫ್ ಹಣ ಬಳಕೆ 6 ಲಕ್ಷ ಜನರಿಗೆ ಇಂದಿರಾ ಕ್ಯಾಂಟಿನ್‌ನಲ್ಲಿ ಉಚಿತ ಊಟ
ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ
ಲಾಕ್‌ಡೌನ್ ಮುಂದೂವರಿಕೆ ಬಗ್ಗೆ ಮೇ 23 ರಂದು ನಿರ್ಧಾರ
3 ತಿಂಗಳ ಬಡ್ಡಿ ಪಾವತಿ ಸಾರಕಾರವೇ ಭರಿಸಲಿದೆ

driving
- Advertisement -

Related news

error: Content is protected !!