Thursday, April 25, 2024
spot_imgspot_img
spot_imgspot_img

ಡ್ರಗ್ಸ್​ ಕೇಸ್​ ಗೆ ಸಂಬಂಧಿಸಿ ಬೆಳ್ಳಂಬೆಳಗ್ಗೆಯೇ ಸೆಲೆಬ್ರಿಟಿಗಳ ಮನೆ ಮೇಲೆ ಪೊಲೀಸ್​ ದಾಳಿ; ಮತ್ತೋರ್ವ ಕನ್ನಡದ ನಟಿಗೆ ಬಂಧನ ಭೀತಿ

- Advertisement -G L Acharya panikkar
- Advertisement -
driving

ಬೆಂಗಳೂರು: ಚಿತ್ರರಂಗದ ಜೊತೆ ನಂಟು ಹೊಂದಿರುವ ಡ್ರಗ್ಸ್​ ದಂಧೆಯ ಜಾಲ ದೊಡ್ಡದಾಗಿದೆ. ತನಿಖೆ ನಡೆಸಿದಂತೆಲ್ಲ ಹೊಸ ಹೊಸ ಸೆಲೆಬ್ರಿಟಿಗಳ ಹೆಸರುಗಳು ಹೊರಬರುತ್ತಿವೆ. ಸೋಮವಾರ (ಆ.30) ಬೆಳ್ಳಂಬೆಳಗ್ಗೆಯೇ ಬೆಂಗಳೂರಿನಲ್ಲಿ ಸೆಲೆಬ್ರಿಟಿಗಳ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.

ಗೋವಿಂದಪುರ ಡ್ರಗ್ಸ್​ ಕೇಸ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ದಾಳಿ ಮಾಡಲಾಗಿದೆ. ನಟಿ ಸೋನಿಯಾ ಅಗರ್​ವಾಲ್​, ಡಿಜೆ ವಚನ್​ ಚಿನ್ನಪ್ಪ, ಉದ್ಯಮಿ ಭರತ್​ ಮುಂತಾದವರ ಮನೆಯ ಮೇಲೆ ಬೆಂಗಳೂರು ಪೂರ್ವ ವಿಭಾಗದ ಪೊಲೀಸರು ದಾಳಿ ಮಾಡಿದ್ದಾರೆ.

ಡ್ರಗ್ ಪೆಡ್ಲರ್ ಥಾಮಸ್ ಈ ಹಿಂದೆ ನೀಡಿದ್ದ ಮಾಹಿತಿಯನ್ನು ಆಧರಿಸಿ ಪೊಲೀಸರು ಕಾರ್ಯಾಚರಣೆ ಮಾಡುತ್ತಿದ್ದಾರೆ. ರಾಜಾಜಿನಗರ, ಪದ್ಮನಾಭನಗರ, ಬೆನ್ಸೆನ್ ಟೌನ್ ಮುಂತಾದ ಕಡೆ ಇರುವ ಸೆಲೆಬ್ರಿಟಿಗಳ ಮನೆಯಲ್ಲಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಮಾದಕ ವಸ್ತುಗಳು ಪತ್ತೆ ಆಗಿದ್ದೇ ಹೌದಾದಲ್ಲಿ ಆರೋಪಿಗಳನ್ನು ಬಂಧಿಸುವ ಸಾಧ್ಯತೆ ದಟ್ಟವಾಗಿದೆ.

- Advertisement -

Related news

error: Content is protected !!