ಕಂಬಳ ವೀಕ್ಷಣೆ ಉಚಿತ ; ಟಿಕೆಟ್ ತೆಗೆದು ಮಾಡುವುದಿಲ್ಲ; ಅಪಪ್ರಚಾರ ಮಾಡುವವರಿಗೆ ಕಂಬಳ ಸಮಿತಿ ಸ್ಪಷ್ಟನೆ


ಎಂಟರಿಂದ ಹತ್ತು ಲಕ್ಷ ಜನರು ಭಾಗವಹಿಸುವಂತಹ ದೊಡ್ಡ ಕಾರ್ಯಕ್ರಮ ಸುಮಾರು ನೂರು ಎಕ್ರೆ ಜಾಗದಲ್ಲಿ ಕಂಬಳ ಕಾರ್ಯಕ್ರಮ ನಡೆಯುತ್ತದೆ. ಚಿಕ್ಕಪುಟ್ಟ ವ್ಯತ್ಯಾಸಗಳು ನಡೆಯುತ್ತದೆ.ಆಮಂತ್ರಣ ಪತ್ರಿಕೆ ಮಾಡಲೂ ಸಹ ಬೇರೆ ಬೇರೆ ಸಮಿತಿಗಳು ಇದೆ.ಕೆಲವು ಕುಸ್ತಿಪಟುಗಳ ಸಂಘಟನೆಯವರು ಬಂದು ನಮ್ಮಲ್ಲಿ ವಿನಂತಿಯನ್ನು ಮಾಡಿಕೊಡಿದ್ದರು. ನಮಗೆ ಕಣ್ಣುತಪ್ಪಿ ಆಮಂತ್ರಣ ಮುದ್ರಿಕೆ ಮಾಡಲಾಗಿತ್ತು. ಈಗ ನಮ್ಮ ಗಮನಕ್ಕೆ ಬಂದಿದ್ದು ನಾವು ಹೊಸ ಆಮಂತ್ರಣವನ್ನು ಮುದ್ರಿಸುವ ಕೆಲಸ ಮಾಡಿದ್ದೇವೆ. ಇದನ್ನು ಇಷ್ಟು ದೊಡ್ಡ ಮಟ್ಟದಲ್ಲಿ ಅಪ ಪ್ರಚಾರ ಮಾಡುವ ಅಗತ್ಯ ಇರಲಿಲ್ಲ, ನಾವು ಟಿಕೆಟ್ ತೆಗೆದು ಕಂಬಳವನ್ನು ನಡೆಸುತ್ತಿದ್ದರೆ ಯಾರಾದರೂ ಕೈ ತೋರಿಸುವಂತ ಕೆಲಸ ಮಾಡಬೇಕಿತ್ತು. ನಾವು ಕಂಬಳವನ್ನು ಮಾಡುವಂತದ್ದು ಜನರಿಗೆ ತೋರಿಸುವಂತಹ ದೃಷ್ಟಿಕೋನ. ಇದು ಒಂದು ಕ್ರೀಡೆ. ದೊಡ್ಡ ಕಾರ್ಯಕ್ರಮ ಮಾಡುವಾಗ ಸಣ್ಣಪುಟ್ಟ ತಪ್ಪುಗಳು ಆಗುತ್ತವೆ.ಇದನ್ನು ಜನರು ಅರ್ಥ ಮಾಡಿಕೊಳ್ಳಬೇಕು.ಸುಪ್ರೀಂಕೊರ್ಟ್‌ನವರೆಗೆ ಹೋರಾಟ ಮಾಡಿದವರು ನಾವು ಸಿ.ಎಮ್.ಸಿದ್ದರಾಮಯ್ಯನವರು ಕೂಡ ಸಹಕಾರ ನೀಡಿದ್ದರಿಂದ ಸುಗ್ರೀವಾಜ್ಞೆ ಆಯಿತು. , ಕೇಂದ್ರ ಸರಕಾರದಿಂದ ಕೂಡ ಸಹಕಾರ ಸಿಕ್ಕಿದೆ.ಯಾರಾದರೂ ಒಳ್ಳೆಯ ಕೆಲಸ ಮಾಡುವವರಿಗೆ ಸಹಕಾರ ಮಾಡಬೇಕು ಕಾಲು ಎಳೆಯುವ ಕೆಲಸ ಮಾಡಬಾರದು ಎಂದು ಬೆಂಗಳೂರು ಕಂಬಳ ಸಮಿತಿ ಅಧ್ಯಕ್ಷ ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.








