Sunday, May 5, 2024
spot_imgspot_img
spot_imgspot_img

ಕಂಪನಿಯೊಂದರಿಂದ ಗ್ರಾಹಕರಿಗೆ ಕೋಟ್ಯಾಂತರ ರೂ. ವಂಚನೆ; ನಾಲ್ವರ ವಿರುದ್ಧ ದಾಖಲು!

- Advertisement -G L Acharya panikkar
- Advertisement -
driving

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ವಂಚನೆ ಪ್ರಕರಣ ಬಯಲಾಗಿದ್ದು, ಗ್ರಾಹಕರಿಗೆ ಕೋಟ್ಯಾಂತರ ರೂಪಾಯಿ ವಂಚಿಸಿರುವುದು ಬೆಳಕಿಗೆ ಬಂದಿದ್ದು ನಾಲ್ವರನ್ನು ಪೊಲೀಸರು ಬಂಧಿಸಿರುವ ಘಟನೆ ತಿಲಕ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಂಧಿತ ಆರೋಪಿಗಳು ಅಬ್ದುಲ್ ನಾಜೀಮ್ ಮೇಖ್ರಿ, ನಯೀಮ್ ಮೇಖ್ರಿ, ಹಿದಾಯತ್-ಉಲ್ಲಾ, ಅಲೀಂ ಮೇಖ್ರಿ ಎನ್ನಲಾಗಿದೆ.

ತಿಲಕ್​ ನಗರದ ಸ್ವಾಗತ್ ರಸ್ತೆಯಲ್ಲಿರುವ ಇಕ್ರಾ (IQRA) ಕಂಪನಿಯು ಹತ್ತಾರು ಜನರಿಗೆ ವಂಚಿಸಿ, 4 ಕೋಟಿಯಷ್ಟು ಹಣವನ್ನು ಲಪಟಾಯಿಸಿದೆ ಎಂದು ಸಾರ್ವಜನಿಕರು ದೂರು ನೀಡಿದ್ಧಾರೆ. ನಂತರ ತಿಲಕ್ ನಗರ ಠಾಣೆ ಪೊಲೀಸರು ಸಿಆರ್​ಪಿಸಿ ಸೆಕ್ಷನ್ 91ರ ಅಡಿಯಲ್ಲಿ ಸಾರ್ವಜನಿಕ ಪ್ರಕಟಣೆ ಹೊರಡಿಸಿದ್ದರು. ಇಕ್ರಾ ಕಂಪನಿಯಲ್ಲಿ ಹೂಡಿಕೆ ಮಾಡಿ ಹಣ ಕಳೆದುಕೊಂಡು ವಂಚನೆಗೊಳಗಾದವರು ಠಾಣೆಗೆ ಬಂದು ಮಾಹಿತಿ ಕೊಡುವಂತೆ ನೋಟೀಸ್​ನಲ್ಲಿ ಮನವಿ ಮಾಡಲಾಗಿತ್ತು.

ಪೊಲೀಸ್ ಪ್ರಕಟಣೆ ಬಳಿಕ 24ಕ್ಕೂ ಹೆಚ್ಚು ಜನರು ದೂರು ನೀಡಲು ಮುಂದೆ ಬಂದರು. ಸದ್ಯ ಇರುವ ಮಾಹಿತಿ ಪ್ರಕಾರ 2020ರಿಂದಲೂ 40ಕ್ಕೂ ಹೆಚ್ಚು ಜನರು ಇಕ್ರಾ ಕಂಪನಿಗೆ ಹಣ ಕೊಟ್ಟಿದ್ದಾರೆ. ಪ್ರತಿಯೊಬ್ಬರಿಂದ 4-10 ಲಕ್ಷದವರೆಗೂ ಹಣ ಪಡೆಯಲಾಗಿದೆ. ತಿಲಕ್ ನಗರದ ನಿವಾಸಿಯೊಬ್ಬರು 10 ಲಕ್ಷ ಹಣ ಕಳೆದುಕೊಂಡಿದ್ಧಾರೆ. ಮಹಾರಾಷ್ಟ್ರದ ನಾಗಪುರ ಮೂಲದ ಐದಾರು ಮಂದಿಗೆ ಲಕ್ಷಾಂತರ ರೂ ವಂಚನೆಯಾಗಿರುವುದು ತಿಳಿದುಬಂದಿದೆ. ಈ ಘಟನೆ ಬಗ್ಗೆ ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ಎಫ್​ಐಆರ್ ದಾಖಲಾಗಿದೆ.

- Advertisement -

Related news

error: Content is protected !!