Wednesday, April 24, 2024
spot_imgspot_img
spot_imgspot_img

ಮ್ಯಾಟ್ರಿಮೋನಿಯಲ್ಲಿ ವರನ ಅನ್ವೇಷಣೆ ಮಾಡುವ ‌ಮುನ್ನಾ ಹುಷಾರು-ಟೆಕ್ಕಿ ಯುವತಿಗೆ 3ಲಕ್ಷ ರೂ. ವಂಚನೆ!!

- Advertisement -G L Acharya panikkar
- Advertisement -

ಬೆಂಗಳೂರು(ಅ.30): ಮ್ಯಾಟ್ರಿಮೋನಿಯಲ್ಲಿ ವರನ ಅನ್ವೇಷಣೆ ಮಾಡೊ ‌ಮುನ್ನಾ ಹುಷಾರಾಗಿರಿ. ಯಾಕಂದ್ರೆ ವ್ಯಕ್ತಿಯೊಬ್ಬ ಮದುವೆ ಹೆಸರಲ್ಲಿ ಬೆಂಗಳೂರಿನ ಟೆಕ್ಕಿಯೊಬ್ಬರಿಗೆ ವಂಚನೆ ಮಾಡಿರೋ ಪ್ರಕರಣ ಬೆಳಕಿಗೆ ಬಂದಿದೆ.

ಟೆಕ್ಕಿ ಯುವತಿ ಮದುವೆಗೆ ವರನ ಅನ್ವೇಷಣೆ ಮಾಡ್ತಿದ್ದರು. ಮ್ಯಾಟ್ರಿಮೋನಿ ವೆಬ್​ಸೈಟ್​ವೊಂದ್ರಲ್ಲಿ ಯುವತಿಗೆ ಕಬೀರ್ ಆನಂದ್ ಎಂಬ ವ್ಯಕ್ತಿಯ ಪರಿಚಯವಾಗಿತ್ತು. ನಂತರ ಪರಸ್ಪರ ನಂಬರ್ ಎಕ್ಸ್ ಚೇಂಜ್ ಆಗಿ ಇಬ್ಬರ ನಡುವೆ ಮಾತುಕತೆ ನಡೆದಿತ್ತು.  ಆರೋಪಿ ಕಬೀರ್ ನಾನು ಲಂಡನ್​​ನಲ್ಲಿ ಇದ್ದೀನಿ. ಬೆಂಗಳೂರಿಗೆ ಬರ್ತಿನಿ ಅಂತ ಯುವತಿಗೆ ಸುಳ್ಳು ಹೇಳಿದ್ದ. ಕಳೆದ ಅಕ್ಟೋಬರ್ 18ರಂದು ಭಾರತಕ್ಕೆ  ಬರುವುದಾಗಿ ತಿಳಿಸಿದ್ದ.

ಅಕ್ಟೋಬರ್ 19ರಂದು ಟೆಕ್ಕಿ ಯುವತಿಗೆ ಅಪರಿಚಿತ ಮಹಿಳೆಯೊಬ್ಬಳು ಕರೆ ಮಾಡಿ ನಾನು ದೆಹಲಿಯ ಕಸ್ಟಮ್ಸ್​ ಅಧಿಕಾರಿ. ಕಬೀರ್ ಆನಂದ್ ಲಂಡನ್​​ನಿಂದ ದೆಹಲಿಗೆ ಬಂದಿದ್ದಾರೆ. ಅಲ್ಲಿಂದ 1.70 ಲಕ್ಷ ಯುರೋ ಕರೆನ್ಸಿ ತಂದಿದ್ದಾರೆ‌. ಇದನ್ನು ರೂಪಾಯಿಗೆ ಪರಿವರ್ತಿಸಲು ಹಣ ಟ್ರಾನ್ಸ್​​ಫರ್ ಮಾಡಿ ಅಂತ ಹೇಳಿದ್ದಳು. ಹೀಗೆ ಯುವತಿಯಿಂದ 3.07 ಲಕ್ಷ ವರ್ಗಾಯಿಸಿಕೊಂಡಿದ್ದಾರೆ. ನಂತರ ಅಪರಿಚಿತ ಮಹಿಳೆಯ ಮೊಬೈಲ್ ಹಾಗೂ ವಂಚಕ ಕಬೀರ್ ಆನಂದ್​ನ ಮೊಬೈಲ್ ಸ್ವಿಚ್ ಆಫ್ ಆಗಿದೆ. ಮೋಸ ಹೋದ ಯುವತಿ ಈ ಕುರಿತು ವೈಟ್ ಫೀಲ್ಡ್ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

- Advertisement -

Related news

error: Content is protected !!