Sunday, June 14, 2026
spot_imgspot_img
spot_imgspot_img

ನರ್ಸ್ ಗಳ ಸ್ನಾನದ ದೃಶ್ಯ ಚಿತ್ರೀಕರಣ ಪ್ರಕರಣ – ಅಶ್ವಿನಿ ಪ್ರಿಯಕರ ಬಂಧನ!!

- Advertisement -
- Advertisement -

ಬೆಂಗಳೂರು: ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾದಿಯರ ಶೌಚಾಲಯದಲ್ಲಿ ಕ್ಯಾಮರ ಅಡಿಗಿಸಿಟ್ಟು ಅವರ ಸ್ನಾನದ ದೃಶ್ಯ ಚಿತ್ರೀಕರಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನರ್ಸ್ ಅಶ್ವಿನಿ ಅವರ ಪ್ರಿಯಕರ ಎಂ. ಪ್ರಭು ಎಂಬಾತನನ್ನು ಚೆನ್ನೈನಲ್ಲಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿ ಪ್ರಭು ತಮಿಳುನಾಡಿನ ವೆಲ್ಲೂರು ಮೂಲದವನಾಗಿದ್ದಾನೆ. ಚೆನ್ನೈನ ಪ್ರತಿಷ್ಠಿತ ಹೋಟೆಲ್ ವೊಂದರಲ್ಲಿ ಬಾಣಸಿಗನಾಗಿ ಕಾರ್ಯ ನಿರ್ವಹಿಸುತ್ತಿದ್ದ. ಅಶ್ಲೀಲ ಚಿತ್ರಗಳನ್ನು ನೋಡುವ ಗೀಳನ್ನು ಆರೋಪಿ ಹೊಂದಿದ್ದ. ಒಮ್ಮೆ ಈ ದೃಶ್ಯ ನೋಡಿ ಬಳಿಕ ಅದನ್ನು ಡಿಲೀಟ್ ಮಾಡುತ್ತಿದ್ದ ಎಂದು ವರದಿಯಾಗಿದೆ. ಆರೋಪಿ ಯಾರಿಗೂ ಈ ಚಿತ್ರ ಶೇರ್ ಮಾಡಿಲ್ಲ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ವೈಟ್ ಫೀಲ್ಡ್ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನರ್ಸ್ ಅಶ್ವಿನಿ ತನ್ನ ಪ್ರಿಯಕರನಿಗೆ ಸ್ನಾನದ ದೃಶ್ಯಗಳನ್ನು ಚಿತ್ರೀಕರಿಸಿ ಕಳುಹಿಸುತ್ತಿದ್ದಳು ಎಂದು ಆರೋಪಿಸಲಾಗಿದೆ. ಅಶ್ವಿನಿಯನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.

- Advertisement -

Related news

error: Content is protected !!