Friday, April 26, 2024
spot_imgspot_img
spot_imgspot_img

ನರ್ಸ್ ಗಳ ಸ್ನಾನದ ವಿಡಿಯೋ ರೆಕಾರ್ಡ್ ಮಾಡಿ ಪ್ರಿಯಕರನಿಗೆ ಕಳುಹಿಸುತ್ತಿದ್ದ ಪ್ರಿಯತಮೆ!!

- Advertisement -G L Acharya panikkar
- Advertisement -

ಬೆಂಗಳೂರು: ಇಲ್ಲೊಬ್ಬಳು ಯುವತಿಯೆ ತನ್ನ ಜೊತೆಗಿದ್ದ ನರ್ಸ್ ಗಳ ಸ್ನಾನ ಮಾಡುವ ವಿಡಿಯೋವನ್ನು ಚಿತ್ರೀಕರಿಸಿ ತನ್ನ ಪ್ರಿಯತಮನಿಗೆ ಕಳುಹಿಸುತ್ತಿದ್ದದ್ದು ಬೆಳಕಿಗೆ ಬಂದಿದೆ.

ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿರುವ ಖಾಸಗಿ ಆಸ್ಪತ್ರೆಯೊಂದರ ನರ್ಸ್ ಅಶ್ವಿನಿ ಎಂಬವಳು ಈ ಕೃತ್ಯ ಮಾಡಿದ್ದಾಳೆ. ಈಕೆ ಕೆಲಸ ಮಾಡುತ್ತಿರುವ ಆಸ್ಪತ್ರೆಯ ಹಾಸ್ಟೆಲ್ ನಲ್ಲಿ ಹಲವು ನರ್ಸ್ ಗಳು ವಾಸವಿದ್ದರು. ಈಕೆ ತನ್ನ ಮೊಬೈಲ್ ನಲ್ಲಿ ಇತರ ನರ್ಸ್ ಗಳು ಸ್ನಾನ ಮಾಡುತ್ತಿರುವ ದೃಶ್ಯಗಳನ್ನು ಸೆರೆ ಹಿಡಿದಿದ್ದಾಳೆ. ಡಿಸೆಂಬರ್ 5 ರಂದು ನರ್ಸ್ ಒಬ್ಬಳು ಸ್ನಾನ ಮಾಡಲು ಹೋದಾಗ ಈ ಘಟನೆ ಬೆಳಕಿಗೆ ಬಂದಿದೆ. ಬಾತ್ ರೂಮ್ ನಲ್ಲಿದ್ದ ಮೊಬೈಲ್ ನೋಡಿದಾಗ ಅದರಲ್ಲಿ ವಿಡಿಯೋ ರೆಕಾರ್ಡ್ ಆಗಿತ್ತು.

ಗ್ಯಾಲರಿಯನ್ನು ಪರೀಕ್ಷಿಸಿದರೆ ಹಲವು ನರ್ಸ್ ಗಳ ಸ್ನಾನದ ದೃಶ್ಯದ ವಿಡಿಯೋ ಸಿಕ್ಕಿದೆ. ಈ ಮೊಬೈಲ ನ್ನು ಹಾಸ್ಟಲ್ ಮೇಲ್ವಿಚಾರಕಿಗೆ ನೀಡಿ ದೂರು ನೀಡಿದ್ದಾರೆ. ಪೊಲೀಸರು ಈಕೆಯನ್ನು ವಿಚಾರಿಸಿದಾಗ ಈಕೆ ವಿಡಿಯೋ ಮಾಡಿ ತನ್ನ ಪ್ರಿಯಕರಿನೆ ಕಳುಹಿಸುತ್ತಿರುವುದಾಗಿ ಒಪ್ಪಿಕೊಂಡಿದ್ದಾಳೆ. ಇದೀಗ ಪೊಲೀಸರು ಈಕೆಯ ಪ್ರಿಯಕರನ ಶೋಧ ಮುಂದುವರಿಸಿದ್ದಾರೆ.

- Advertisement -

Related news

error: Content is protected !!