Saturday, June 6, 2026
spot_imgspot_img
spot_imgspot_img

ಆನ್ ಲೈನ್ ಗೇಮ್ ನಿಷೇಧಕ್ಕೆ ಮುಂದಾದ ರಾಜ್ಯ ಸರ್ಕಾರ

- Advertisement -
- Advertisement -

ಬೆಂಗಳೂರು: ಆನ್ ಲೈನ್ ಗೇಮ್ ಪ್ರಿಯರಿಗೆ ರಾಜ್ಯ ಸರ್ಕಾರ ಬಿಗ್ ಶಾಕ್ ನೀಡಲು ಮುಂದಾಗಿದ್ದು. ಶೀಘ್ರವೇ ಆನ್ ಲೈನ್ ಗೇಮ್ ಗಳನ್ನು ನಿಷೇಧಿಸುವ ಹೊಸ ಕಾನೂನು ಜಾರಿಗೊಳಿಸಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಆನ್ ಲೈನ್ ಗೇಮ್ ಗಳಿಗೆ ಯುವಕರು ಬಲಿಯಾಗುತ್ತಿದ್ದು ಇದಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಕಾನೂನು ರೂಪಿಸಲಿದೆ. ಈಗಾಗಲೇ ಅನೇಕ ರಾಜ್ಯಗಳಲ್ಲಿ ಆನ್ ಲೈನ್ ಗೇಮ್ ನಿಷೇಧಿಸಲಾಗಿದೆ.

ಅಲ್ಲಿನ ಸರ್ಕಾರಗಳು ಯಾವ ಯಾವ ನಿಯಮ ಮತ್ತು ಕಾನೂನುಗಳನ್ನು ಜಾರಿಗೊಳಿಸಿವೆ ಎಂಬ ಬಗ್ಗೆ ಅಧ್ಯಯನ ಮಾಡುತ್ತಿದ್ದೇವೆ. ಶೀಘ್ರದಲ್ಲೇ ರಾಜ್ಯದಲ್ಲೂ ನಿಷೇಧ ಹೇರುವುದು ನಿಶ್ಚಿತ ಎಂದರು.

- Advertisement -

Related news

error: Content is protected !!