Saturday, June 13, 2026
spot_imgspot_img
spot_imgspot_img

ಬೆಳ್ತಂಗಡಿ: ವಿದ್ಯುತ್ ತಂತಿಗಳಿಗೆ ಕಾಂಕ್ರೀಟ್ ಮಿಕ್ಸಿಂಗ್ ಲಾರಿ ಸಿಲುಕಿ ಉರುಳಿ ಬಿದ್ದ ಕಂಬಗಳು…!

- Advertisement -
- Advertisement -

ಬೆಳ್ತಂಗಡಿ: ಕಾಂಕ್ರೀಟ್ ಮಿಕ್ಸಿಂಗ್ ಲಾರಿಯೊಂದು ವಿದ್ಯುತ್ ತಂತಿಗಳಿಗೆ ಸಿಲುಕಿದ ಘಟನೆ ಬೆಳ್ತಂಗಡಿಯ ನಾಲ್ಕೂರು ಗ್ರಾಮದ ಸೂಳಬೆಟ್ಟು ಎಂಬಲ್ಲಿ ನಡೆದಿದೆ.

ವೇಣೂರು- ಅಳದಂಗಡಿ ರಸ್ತೆಯಲ್ಲಿನ ಸೂಳಬೆಟ್ಟುವಿನಲ್ಲಿ ಮೇಲ್ಭಾಗದಲ್ಲಿದ್ದ ವಿದ್ಯುತ್ ತಂತಿಗಳನ್ನು ಗಮನಿಸದೆ ಚಾಲಕ ಲಾರಿ ಚಲಾಯಿಸಿದ್ದರಿಂದ ತಂತಿಗಳು ವಾಹನಕ್ಕೆ ಸಿಲುಕಿವೆ. ಇದರಿಂದ ತಂತಿಗಳೊಂದಿಗೆ ಎರಡು ಜೋಡಿ ಕಂಬಗಳು ರಸ್ತೆಗೆ ಅಡ್ಡಲಾಗಿ ಉರುಳಿ ಬಿದ್ದವು. ತಂತಿಗಳ ಘರ್ಷಣೆಯಿಂದ ಭಾರೀ ಬೆಂಕಿ ಕಾಣಿಸಿತ್ತು. ಇದು ಕಾರ್ಕಳದ ಗುತ್ತಿಗೆ ಕಂಪೆನಿಯೊಂದರ ಲಾರಿಯಾಗಿದ್ದು, ಅದನ್ನು ಅಳದಂಗಡಿಯಲ್ಲಿ ತಡೆಹಿಡಿಯಲಾಗಿದೆ.

ಚಾಲಕ ಕುಷ್ಟಗಿಯ ಕುಮಾರ್‌ನನ್ನು ವೇಣೂರು ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಯಿತು. ಸ್ಥಳಕ್ಕೆ ಮೆಸ್ಕಾಂ ಎಂಜಿನಿಯರ್, ವೇಣೂರು ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

Related news

error: Content is protected !!