Friday, July 4, 2025
spot_imgspot_img
spot_imgspot_img

ವೃದ್ಧನ ಕೈಕಾಲು ಕಟ್ಟಿ ಹಾಕಿ ದರೋಡೆ; 6 ಮಂದಿ ಸೆರೆ!

- Advertisement -
- Advertisement -

ಬೆಂಗಳೂರು: ಒಂಟಿ ವೃದ್ಧನ ಕೈಕಾಲು ಕಟ್ಟಿ ಹಾಕಿ ದರೋಡೆ ಮಾಡಿದ್ದವರನ್ನು ಬಂಧಿಸಲಾಗಿದೆ. ಬೆಂಗಳೂರಿನ ಬೆಳ್ಳಂದೂರು ಪೊಲೀಸರಿಂದ 6 ಆರೋಪಿಗಳನ್ನು ಸೆರೆ ಹಿಡಿಯಲಾಗಿದೆ.

ಬಂಧಿತ ಆರೋಪಿಗಳು ನಿತಿನ್, ಹೃತಿಕ್, ರಾಜವರ್ಧನ್, ಅರುಣ್, ಮಹದೇವ್, ತೇಜಸ್ ಎನ್ನಲಾಗಿದೆ. 62 ವರ್ಷ ವಯಸ್ಸಿನ ಲಕ್ಷ್ಮಣ್ ಎಂಬವರ ಮನೆಗೆ ರಾತ್ರಿ ನುಗ್ಗಿ ಖದೀಮರು ವೃದ್ಧನ ಕೈಕಾಲು ಕಟ್ಟಿ ಹಾಕಿ ದರೋಡೆ ಮಾಡಿದ್ದಾರೆ. 40 ಲಕ್ಷ ಮೌಲ್ಯದ ಚಿನ್ನಾಭರಣ, ಹಣ ಕಳವುಗೈದು ಪರಾರಿಯಾಗಿದ್ದರು. ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇದರಿಂದ ಆರೋಪಿಗಳನ್ನು ಬೆಳ್ಳಂದೂರು ಠಾಣೆಯ ಪೊಲೀಸರು ಬಂಧಿಸಿದ್ದಾರೆ

driving
- Advertisement -

Related news

error: Content is protected !!