Friday, September 4, 2026
spot_imgspot_img
spot_imgspot_img

ಉಳ್ಳಾಲ: ಬೈಕ್‌ ಸ್ಕಿಡ್‌ ಆಗಿ ಯುವಕ ಸ್ಥಳದಲ್ಲೇ ಮೃತ್ಯು; ಸಹಸವಾರ ಗಂಭೀರ

- Advertisement -
- Advertisement -
vtv vitla

ಉಳ್ಳಾಲ: ಬೈಕ್ ಸ್ಕಿಡ್ ಆಗಿ ಬಿದ್ದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು, ಸಹ ಸವಾರ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆ ಸೇರಿದ ಘಟನೆ ರಾ.ಹೆ.65ರ ಜಪ್ಪಿನಮೊಗರು ಮಹಾಕಾಳಿ ಪಚ್ಚು ಕ್ರಾಸ್ ಬಳಿ ನಸುಕಿನ ವೇಳೆ ನಡೆದಿದೆ.

ಚಿಕ್ಕಮಗಳೂರು ಜಿಲ್ಲೆ ಹೆರಣೆ ನಿವಾಸಿ ಪ್ರತಾಪ್‌ ಶೆಟ್ಟಿ (32) ಮೃತ ಯುವಕ. ಪ್ರತಾಪ್‌ ಅವರ ಚಿಕ್ಕಮ್ಮನ ಮಗ ವೈನ್ & ಡೈನ್ ಬಾರ್ ಕೌಂಟರ್ ಬಾಯ್ ಆಗಿದ್ದ ಚಿಕ್ಕಮಗಳೂರು ಜಿಲ್ಲೆಯ ಕಿಗ್ಗ ನಿವಾಸಿ ಅಭಿ ಶೆಟ್ಟಿ(22) ಗಂಭೀರ ಸ್ಥಿತಿಯಲ್ಲಿ ನಗರದ ಇಂಡಿಯಾನ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಪ್ರತಾಪ್‌ ಮತ್ತು ಅಭಿ ಇಂದು ಮುಂಜಾನೆ 2 ಗಂಟೆಗೆ ಕೆಲಸ ಮುಗಿಸಿ ಅಣ್ಣನ ರೂಂ ಕಡೆ ತೆರಳುತ್ತಿದ್ದಾಗ ವೇಳೆ ಈ ಅಪಘಾತ ಸಂಭವಿಸಿದೆ. ಜಪ್ಪಿನಮೊಗರು ಮಹಾಕಾಳಿ ಪಡ್ಪು ಕ್ರಾಸ್ ಬಳಿ ವೇಗದಲ್ಲಿದ್ದ ಬೈಕ್‌ ಸ್ಕಿಡ್ ಆಗಿ ಬಿದ್ದಿದೆ. ಬೈಕ್ ಬಿದ್ದ ರಭಸಕ್ಕೆ ಸವಾರರಿಬ್ಬರು 50 ಮೀಟರ್ ನಷ್ಟು ದೂರ ಎಸೆಯಲ್ಪಟ್ಟಿದ್ದು, ಸವಾರ ಪ್ರತಾಪ್‌ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸಹ ಸವಾರ ಅಭಿ ಸ್ಥಿತಿಯೂ ಚಿಂತಾಜನಕವಾಗಿದ್ದು ಆತನನ್ನ ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಆಸ್ಪತ್ರೆಗೆ ಸೇರಿಸಿ ಪ್ರಕರಣ ದಾಖಲಿಸಿದ್ದಾರೆ.

- Advertisement -

Related news

error: Content is protected !!