Monday, June 22, 2026
spot_imgspot_img
spot_imgspot_img

ಬೆಂಗಳೂರು: ಸೆಕ್ಯೂರಿಟಿ ಗಾರ್ಡ್ ನಿಂದ ಮನೆಗೆ ಕನ್ನ!

- Advertisement -
- Advertisement -

ಬೆಂಗಳೂರು: ತಿರುಪತಿಗೆ ಹೋಗಿ ಬರುತ್ತೇನೆ ಸ್ವಲ್ಪ ಮನೆ ಕಡೆ ಗಮನ ಇರಲಿ ಎಂದು ಹೇಳಿ ಹೋಗಿದ್ದ ಮನೆಯೊಡೆಯನ ಮನೆಯಲ್ಲಿ ದರೋಡೆ ನಡೆದಿದೆ.ಬೆಂಗಳೂರಿನ ಕೆ ಜಿ ಹಳ್ಳಿಯಲ್ಲಿ ಈ ಪ್ರಕರಣ ವರದಿಯಾಗಿದೆ.

ದೀಪಕ್ ಎಂಬವರು ತಮ್ಮ ಕುಟುಂಬ ಸದಸ್ಯರ ಜತೆ ತಿರುಪತಿಗೆ ತೆರಳಿದ್ದರು. ಈ ವೇಳೆ ಮನೆ ಕಡೆ ಜಾಗ್ರತೆ , ಎಚ್ಚರ ಇರಲಿ ಎಂದು ಭದ್ರತಾ ಸಿಬ್ಬಂದಿ ಸಂಜಯ್ ಗೆ ಎಚ್ಚರಿಕೆ ನೀಡಿದ್ದರು. ಇದನ್ನೇ ದುರುಪಯೋಗ ಪಡಿಸಿದ್ದ ನೇಪಾಳ ಮೂಲದ ಸಂಜಯ್ ತನ್ನ ಸಹಚರರ ಜತೆ ಸೇರಿ ಮನೆಯಲ್ಲಿ ದರೋಡೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.

ಸುಮಾರು 49 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು ನಗದು ಅಪಹರಿಸಲಾಗಿದೆ. ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೆ ಜಿ ಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!