- Advertisement -
- Advertisement -





ಬೆಂಗಳೂರು: ವಾಟರ್ ಫಿಲ್ಟರ್ ಕಾಮಗಾರಿ ವಿಚಾರವಾಗಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಸ್ಮಶಾನದಲ್ಲಿ ವಾಟರ್ ಫಿಲ್ಟರ್ ಕಾಮಗಾರಿ ಬೇಡ ಎಂದಿದ್ದಕ್ಕೆ ದೇವನಹಳ್ಳಿ ತಾಲ್ಲೂಕಿನ ಸಾವಕನಹಳ್ಳಿ ಗ್ರಾಮದ 142ರ ಸ್ಮಶಾನ ಜಾಗದಲ್ಲಿ ಗಲಾಟೆ ನಡೆದಿದೆ.
ಸ್ಮಶಾನದಲ್ಲಿ ವಾಟರ್ ಫಿಲ್ಟರ್ ಬೇಡ, ಗ್ರಾಮದ ಮಧ್ಯದಲ್ಲಿ ಮಾಡಿ ಎಂದು ಕೆಲ ಗ್ರಾಮಸ್ಥರು ವಾದ ಮಾಡಿದ್ದಾರೆ. ಹೀಗೆ ಮಾತಿನ ಚಕಮಕಿ ಜೋರಾಗಿ ಗ್ರಾಮದ ಮುನಿರಾಜು ಮತ್ತು ಇತರರ ಮೇಲೆ ಮಾರಣಾಂತಿಕವಾಗಿ ಗ್ರಾಮದ ಹೇಮಂತ್, ರಾಜೇಶ್, ಕೃಷ್ಣ ಎಂಬುವರಿಂದ ಹಲ್ಲೆ ನಡೆದಿದೆ.
ಬಮೂಲ್ ನಿರ್ದೇಶಕ ಎಸ್ಪಿ ಮುನಿರಾಜು ಸಹಚರರಿಂದ ಹಲ್ಲೆ ಆಗಿದೆ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ. ಹಲ್ಲೆಗೆ ಒಳಗಾದ ಮುನಿರಾಜು ಅವರನ್ನು ದೇವನಹಳ್ಳಿ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಎದೆಯ ಭಾಗಕ್ಕೆ ಗಂಭೀರ ಪೆಟ್ಟಾಗಿರುವ ಕಾರಣ ಬೆಂಗಳೂರಿಗೆ ಚಿಕಿತ್ಸೆಗೆಂದು ರವಾನೆ ಮಾಡಲಾಗಿದೆ. ಕೂಡಲೇ ಹಲ್ಲೆ ಮಾಡಿದವರ ವಿರುದ್ಧ ಕ್ರಮ ಆಗಬೇಕೆಂದು ಗ್ರಾಮಸ್ಥರ ಪಟ್ಟು ಹಿಡಿದಿದ್ದಾರೆ.
- Advertisement -








