Thursday, July 23, 2026
spot_imgspot_img
spot_imgspot_img

ವಿಟ್ಲ ಗ್ರಾಮೀಣ ಸಹಕಾರಿ ಸಂಘಕ್ಕೆ ಐತಿಹಾಸಿಕ ಸಾಧನೆ: 1090 ಕೋಟಿ ವ್ಯವಹಾರ, 4.05 ಕೋಟಿ ಲಾಭ

- Advertisement -
- Advertisement -

ವಿಟ್ಲ: ವಿಟ್ಲ ಗ್ರಾಮೀಣ ಸಹಕಾರಿ ಸಂಘ ನಿಯಮಿತವು 2025-26ನೇ ಆರ್ಥಿಕ ವರ್ಷದಲ್ಲಿ ಸಾರ್ವಕಾಲಿಕ ದಾಖಲೆಯಾದ ರೂ.1090 ಕೋಟಿ ವ್ಯವಹಾರ ಹಾಗೂ ರೂ.4.05 ಕೋಟಿ ಲಾಭ ಗಳಿಸಿ ಹೊಸ ಇತಿಹಾಸ ನಿರ್ಮಿಸಿದೆ.

ಕಳೆದ ಸಾಲಿನಿಗಿಂತ ರೂ.226 ಕೋಟಿ ಅಧಿಕ ವ್ಯವಹಾರ ನಡೆಸುವ ಮೂಲಕ ಸಂಘವು ಮಹತ್ವದ ಸಾಧನೆ ದಾಖಲಿಸಿದೆ.ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ತಾಲೂಕಿನ ಬೆಳುವಾಯಿ ಗ್ರಾಮವನ್ನು ಹೊರತುಪಡಿಸಿ ಜಿಲ್ಲೆಯ ಉಳಿದ ಎಲ್ಲಾ ತಾಲೂಕಿನ ಕಾರ್ಯವ್ಯಾಪ್ತಿಯನ್ನು ಹೊಂದಿರುವ ಸಂಘವು ವಿಟ್ಲದಲ್ಲಿ ಪ್ರಧಾನ ಕಚೇರಿ ಹಾಗೂ ಕನ್ಯಾನ, ಕಲ್ಲಡ್ಕ, ಬಿ.ಸಿ.ರೋಡ್ ಮತ್ತು ಪುತ್ತೂರಿನಲ್ಲಿ ಶಾಖೆಗಳನ್ನು ಹೊಂದಿದೆ. ಪ್ರಸ್ತುತ ಸಂಘದಲ್ಲಿ 9,189 ಸದಸ್ಯರು ಇದ್ದು, ರೂ.3.04 ಕೋಟಿ ಪಾಲು ಬಂಡವಾಳ ಹೊಂದಿದೆ.ಸಂಘವು 2025-26ರಲ್ಲಿ ರೂ.149.84 ಕೋಟಿ ಠೇವಣಿ ಸಂಗ್ರಹಣೆ ಮಾಡಿದ್ದು, ಇದು ಕಳೆದ ಸಾಲಿನಿಗಿಂತ 11.22 ಶೇಕಡಾ ಹೆಚ್ಚಳವಾಗಿದೆ.

ಜೊತೆಗೆ ರೂ.125.63 ಕೋಟಿ ಹೊರಬಾಕಿ ಸಾಲ ಹೊಂದಿದ್ದು, 95.11 ಶೇಕಡಾ ಸಾಲ ವಸೂಲಾತಿ ಸಾಧಿಸಿದೆ.ಪ್ರಸ್ತುತ ಸಂಘದಲ್ಲಿ ರೂ.9.96 ಕೋಟಿ ಮೀಸಲು ನಿಧಿ, ರೂ.13.65 ಕೋಟಿ ಇತರ ನಿಧಿಗಳು, ರೂ.4.43 ಕೋಟಿ ಚರ ಹಾಗೂ ಸ್ಥಿರಾಸ್ತಿಗಳು ಇದ್ದು, ದುಡಿಯುವ ಬಂಡವಾಳ ರೂ.180.55 ಕೋಟಿ ಆಗಿದೆ. ಹಲವು ವರ್ಷಗಳಿಂದ ಆಡಿಟ್‌ನಲ್ಲಿ ‘ಎ’ ತರಗತಿ ಸ್ಥಾನ ಕಾಯ್ದುಕೊಂಡಿರುವ ಸಂಘವು ಕಳೆದ ಸಾಲಿನಲ್ಲಿ ಸದಸ್ಯರಿಗೆ 22 ಶೇಕಡಾ ಡಿವಿಡೆಂಡ್ ವಿತರಿಸಿದೆ.ಸಂಘವು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, ಮಂಗಳೂರು ಇವರಿಂದ ಸತತವಾಗಿ ನಾಲ್ಕು ಬಾರಿ ಸಾಧನಾ ಪ್ರಶಸ್ತಿ ಪಡೆದುಕೊಂಡಿದ್ದು, ಶೀಘ್ರದಲ್ಲೇ ಉಪ್ಪಿನಂಗಡಿಯಲ್ಲಿ 5ನೇ ಶಾಖೆ ಆರಂಭಿಸಲು ಸಿದ್ಧತೆ ನಡೆಸುತ್ತಿದೆ.

ಶಾಖಾವಾರು ಸಾಧನೆ:ಪ್ರಧಾನ ಕಚೇರಿ: ರೂ.623 ಕೋಟಿ ವ್ಯವಹಾರ, ರೂ.87.09 ಕೋಟಿ ಠೇವಣಿ, ರೂ.45.70 ಕೋಟಿ ಸಾಲ, ರೂ.3.17 ಕೋಟಿ ಲಾಭಕನ್ಯಾನ ಶಾಖೆ: ರೂ.128 ಕೋಟಿ ವ್ಯವಹಾರ, ರೂ.21.01 ಕೋಟಿ ಠೇವಣಿ, ರೂ.20.79 ಲಕ್ಷ ಲಾಭಕಲ್ಲಡ್ಕ ಶಾಖೆ: ರೂ.146.53 ಕೋಟಿ ವ್ಯವಹಾರ, ರೂ.11.82 ಕೋಟಿ ಠೇವಣಿ, ರೂ.38.03 ಲಕ್ಷ ಲಾಭ, ಬಿ.ಸಿ.ರೋಡ್ ಶಾಖೆ: ರೂ.82.67 ಕೋಟಿ ವ್ಯವಹಾರ, ರೂ.11.02 ಕೋಟಿ ಠೇವಣಿ, ರೂ.5.18 ಲಕ್ಷ ಲಾಭ, ಪುತ್ತೂರು ಶಾಖೆ: ರೂ.110.52 ಕೋಟಿ ವ್ಯವಹಾರ, ರೂ.18.87 ಕೋಟಿ ಠೇವಣಿ, ರೂ.24.50 ಲಕ್ಷ ಲಾಭ, ಮುಂದಿನ ಸಾಲಿನ ಗುರಿ:2026-27ನೇ ಸಾಲಿನಲ್ಲಿ ಸಂಘವು ರೂ.1150 ಕೋಟಿಗೂ ಅಧಿಕ ವ್ಯವಹಾರ, ರೂ.160 ಕೋಟಿ ಠೇವಣಿ ಸಂಗ್ರಹಣೆ, ರೂ.135 ಕೋಟಿ ಸಾಲ ವಿತರಣೆ, ರೂ.4.45 ಕೋಟಿ ಲಾಭ, ಹಾಗೂ 96 ಶೇಕಡಾ ಸಾಲ ವಸೂಲಾತಿ ಗುರಿ ಹೊಂದಿದೆ.

ಸಂಘದ ಅಧ್ಯಕ್ಷರಾಗಿ ಹೆಚ್. ಜಗನ್ನಾಥ ಸಾಲಿಯಾನ್, ಉಪಾಧ್ಯಕ್ಷರಾಗಿ ಮನೋರಂಜನ್ ಕೆ.ಆರ್. ಕಾರ್ಯನಿರ್ವಹಿಸುತ್ತಿದ್ದು, ಅನುಭವಿ ಆಡಳಿತ ಮಂಡಳಿ ಹಾಗೂ 32 ನುರಿತ ಸಿಬ್ಬಂದಿಗಳ ಸಹಕಾರದೊಂದಿಗೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಕೃಷ್ಣ ಮುರಳಿ ಶ್ಯಾಮ್ ಕೆ. ಸಂಘವನ್ನು ಅಭಿವೃದ್ಧಿಯ ದಾರಿಯಲ್ಲಿ ಮುನ್ನಡೆಸುತ್ತಿದ್ದಾರೆ.

- Advertisement -

Related news

error: Content is protected !!