Tuesday, July 21, 2026
spot_imgspot_img
spot_imgspot_img

*ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ಚುನಾವಣೆ* *15 ಸ್ಥಾನಗಳಲ್ಲಿ ಭರ್ಜರಿ ಜಯ ಗಳಿಸಿದ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿಗಳು*

- Advertisement -
- Advertisement -

ಪ್ರತಿಷ್ಠಿತ ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ನ ಆಡಳಿತ ಮಂಡಳಿಯ ಚುನಾವಣೆ ಇಂದು (ಮಾರ್ಚ್ 9) ರಂದು ನಡೆದಿದ್ದು 15 ಸ್ಥಾನದಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿಗಳು ಜಯಗಳಿಸಿದ್ದಾರೆ. 6 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿ 9 ಸ್ಥಾನದಲ್ಲಿ ಇಂದು ಚುನಾವಣೆ ನಡೆಯಿತು.

ಜಯಗಳಿಸಿದ ಅಭ್ಯರ್ಥಿಗಳನ್ನು ಬಿಜೆಪಿ ಕಾರ್ಯಕರ್ತರು ವಿಟ್ಲ ಬಸ್ ನಿಲ್ದಾಣ ದಲ್ಲಿ ಮೆರವಣಿಗೆ ನಡೆಸಿಪಟಾಕಿ ಸಿಡಿದು ಸಂಭ್ರಮಿಸಿದರು.ಬಳಿಕ ವಿಟ್ಲ ಬಿಜೆಪಿ ಕಛೇರಿ ಬಳಿ ಅಭಿನಂದನಾ ಕಾರ್ಯಕ್ರಮ ನಡೆಯಿತು. ಪುತ್ತೂರು ಬಿಜೆಪಿ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ಮಾತನಾಡಿ ಕಾರ್ಯಕರ್ತರಿಗೆ ಮತ್ತು ಚುನಾಯಿತ ಅಭ್ಯರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು.ಚುನಾವಣಾ ಪ್ರಕ್ರಿಯೆಯನ್ನು ಶಿವಲಿಂಗಯ್ಯ ಎಂ ಸಹಕಾರ ಅಭಿವೃದ್ಧಿ ಅಧಿಕಾರಿ, ಸಹಕಾರಗಳ ಉಪನಿಬಂಧಕರ ಕಛೇರಿ ಮಂಗಳೂರು ಇವರು ಚುನಾವಣಾ ರಿಟರ್ನಿಂಗ್ ಆಫೀಸರ್ ಆಗಿ ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೃಷ್ಣ ಮುರಳಿ ಶ್ಯಾಮ್ ಮತ್ತು ಸಿಬ್ಬಂದಿಗಳು ಸಹಕರಿಸಿದರು.15 ಸ್ಥಾನಗಳಲ್ಲಿ 6 ಸ್ಥಾನಗಳು ಅವಿರೋಧವಾಗಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ಸಾಮಾನ್ಯ ಕ್ಷೇತ್ರಕ್ಕೆ 9 ಸ್ಥಾನಗಳಿಗೆ 13 ಅಭ್ಯರ್ಥಿಗಳು ಸ್ಪರ್ಧಿಸಿದರು.ಅದರಲ್ಲಿ 9 ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿಗಳು ವಿಜಯ ಸಾಧಿಸಿದ್ದಾರೆ.ಚಿತ್ರಾಂಜನ್ ಯನ್ ಯಸ್ ಡಿ, ಜಯರಾಮ ಪೂಜಾರಿ, ದಿನಕರ ಆಳ್ವ ಕೆ, ಸುರೇಶ್ ಬಿ ಪಕ್ಷೇತರ ಅಭ್ಯರ್ಥಿಗಳು ಸ್ಪರ್ಧಿಸಿ ಸೋಲನುಭವಿಸಿದ್ದಾರೆ.ನಿರ್ದೇಶಕರಾಗಿ ಆಯ್ಕೆಯಾದ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿಗಳು- ಕೇಶವ ಎ, ಗೋವರ್ಧನ್ ಕುಮಾರ್, ಶುಭಲಕ್ಷ್ಮಿ, ಜಯಂತಿ ಹೆಚ್ ರಾವ್, ತಿರುಮಲೇಶ್ವರ ಭಟ್ ಪಿ, ಹೆಚ್ ಜಗನ್ನಾಥ ಸಾಲ್ಯಾನ್ , ಭಾಸ್ಕರ ಶೆಟ್ಟಿ, ಮನೋರಂಜನ್ ಕೆ.ಆರ್., ಮೋಹನ್ ಕೆ. ಎಸ್, ರಾಮದಾಸ್ ಶೆಣೈ ವಿ., ವಿಶ್ವನಾಥ ಎಂ, ಸತೀಶ್ ಪಿ, ದಯಾನಂದ ಆಳ್ವ ಕೆ, ಪೂವಪ್ಪ ಎಸ್, ದಿವಾಕರ.ವಿ.

- Advertisement -

Related news

error: Content is protected !!