Monday, May 6, 2024
spot_imgspot_img
spot_imgspot_img

ಬ್ಯಾನರ್ ಕಂಬ ಬಿದ್ದು ಬೈಕ್ ಸವಾರ ಮೃತ್ಯು..!

- Advertisement -G L Acharya panikkar
- Advertisement -

ಬ್ಯಾನರ್ ಅಳವಡಿಕೆಗಾಗಿ ನಡು ರಸ್ತೆಯಲ್ಲಿ ನೆಟ್ಟ ಕಂಬದಿಂದ ಬೈ ಸವಾರ ಜೀವಕಳಕೊಂಡ ಘಟನೆ ದಾವಣಗೆರೆ ನಗರದಲ್ಲಿ ನಡೆದಿದೆ.

ಮೃತಪಟ್ಟ ವ್ಯಕ್ತಿ ಗಣೇಶ್ (40) ಎಂದು ಗುರುತಿಸಲಾಗಿದೆ.

ನಗರದ ನಿಟ್ಟುವಳ್ಳಿ 60 ಅಡಿ ರಸ್ತೆಯ ಆಂಜನೇಯ ದೇವಸ್ಥಾನದ ಬಳಿ ನಡುರಸ್ತೆಯಲ್ಲಿ ನೆಟ್ಟ ಕಂಬಕ್ಕೆ ಬಡ ಬೈಕ್ ಸವಾರ ಜೀವ ತೆತ್ತಿದ್ದಾನೆ. ರಸ್ತೆ ಮಧ್ಯೆ ಬ್ಯಾನರ್ ಕಟ್ಟಲು ಈ ಕಂಬ ನೆಡಲಾಗಿತ್ತು. ಅದನ್ನು ಗಮನಿಸಿದೆ ಬಂದ ಟೆಂಪೋ ಟ್ರಾವೆಲರ್ ವಾಹನ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಂಬ ಮುರಿದು ಎದುರಿನಿಂದ ಬಂದ ಬೈಕ್ ಸವಾರನ ತಲೆಯ ಮೇಲೆ ಬಿದ್ದಿದೆ. ಗಂಭೀರ ಗಾಯಗೊಂಡ ಬೈಕ್​ ಸವಾರನನ್ನು ಕೂಡಲೇ ಆಸ್ಪತ್ರೆಗೆ ಸೇರಿಸಲಾದರೂ, ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. ನಡು ರಸ್ತೆಯಲ್ಲಿ‌ಕಂಬ ನೆಟ್ಟವರ ವಿರುದ್ದ ಜನರು ಆಕ್ರೋಶ ಹೊರ ಹಾಕಿದ್ದು, ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇನ್ನು ಘಟನೆ ಕುರಿತು ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!