Tuesday, June 9, 2026
spot_imgspot_img
spot_imgspot_img

ವಿಟ್ಲ: (ಜು.23) ಬಂಟರ ಸಂಘ ಗ್ರಾಮ ಸಮಿತಿ ವತಿಯಿಂದ ಲೇಸ್‌ದ ಲೆಪ್ಪೋಲೆ ಆಟಿದ ವನಸ್ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

- Advertisement -
- Advertisement -
vtv vitla

ವಿಟ್ಲ: ಬಂಟರ ಸಂಘ ಗ್ರಾಮ ಸಮಿತಿ ವಿಟ್ಲ ವತಿಯಿಂದ ಲೇಸ್‌ದ ಲೆಪ್ಪೋಲೆ ಆಟಿದ ವನಸ್ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಜು. 23ರಂದು ವಿಟ್ಲ ಪದವಿಪೂರ್ವ ಕಾಲೇಜು ರಂಗಮಂದಿರದಲ್ಲಿ ಬೆಳಗ್ಗೆ 9.00ಗಂಟೆಯಿಂದ ನಡೆಯಲಿದೆ.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಟರ ಗ್ರಾಮ ಸಮಿತಿ ವಿಟ್ಲ ಇದರ ಅಧ್ಯಕ್ಷರಾದ ರವೀಂದ್ರ ಶೆಟ್ಟಿ ಎಂ ವಹಿಸಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ಬಂಟರ ಸಂಘ ವಿಟ್ಲ ವಲಯ ವಲಯಾಧ್ಯಕ್ಷರಾದ ಚೆಲ್ಲಡ್ಕ ದಡ್ಡಂಗಡಿ ರಾಧಾಕೃಷ್ಣ ಶೆಟ್ಟಿ ನೇರವೇರಿಸಲಿದ್ದು, ಮುಖ್ಯ ಅತಿಥಿಗಳಾಗಿ ತಾಲೂಕು ಬಂಟರ ಸಂಘ ಬಂಟ್ವಾಳ ತಾಲೂಕು ಕೋಶಾಧಿಕಾರಿ Ln. ಲೋಕೇಶ್ ಶೆಟ್ಟಿ ಭಾಗವಹಿಸಲಿದ್ದಾರೆ. ವಿಟ್ಲ ಗ್ರಾಮ ಸಮಿತಿ ಗೌರವಾಧ್ಯಕ್ಷ ಕೆದಂಬಾಡಿ ತಿಮ್ಮಪ್ಪ ರೈ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.

ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳು ನಡೆಯಲಿದೆ. ವಿಟ್ಲ ಗ್ರಾಮದ SSLC ಮತ್ತು PUCಯಲ್ಲಿ ಉತ್ತೀರ್ಣರಾದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ.

- Advertisement -

Related news

error: Content is protected !!