
ಕಲ್ಲಡ್ಕ ವಲಯ ಬಂಟರ ಸಂಘವು ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಉತ್ತಮ ಪ್ರದರ್ಶನವನ್ನು ನೀಡಿದ ಬಗ್ಗೆ ಸಂಭ್ರಮಾಚರಣೆಗಾಗಿ ವಲಯ್ಯಾಧ್ಯಕ್ಷರಾದ ಗಣೇಶ್ ಶೆಟ್ಟಿ ಗೋಳ್ತಮಜಲುರವರ ನಿವಾಸದಲ್ಲಿ ವಲಯ ಬಂಟ ಸಮ್ಮಿಲನ ಕಾರ್ಯಕ್ರಮವು ಜನವರಿ 18 2026 ನೇ ಆದಿತ್ಯವಾರದಂದು ಜರುಗಿತು. ಕಾರ್ಯಕ್ರಮದಲ್ಲಿ ವಲಯದ ಬಂಟ ಬಾಂಧವರಿಗೆ ಮಾಹಿತಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಪುತ್ತೂರಿನ ನ್ಯಾಯವಾದಿಗಳಾದ ದುರ್ಗಾ ಪ್ರಸಾದ್ ರೈ ಕುಂಬ್ರ ಮತ್ತು ಪೆರ್ಲದ ಹೊಂಬೆಳಕು ವಿದ್ಯಾ ಕೇಂದ್ರದ ಪ್ರಾಂಶುಪಾಲರಾದ ಡಾಕ್ಟರ್ ಕಿಶೋರ್ ಕುಮಾರ್ ರೈ ಶೇಣಿ ಬಂಟ ಸಮಾಜಕ್ಕೆ ಸಂಬಂಧಪಟ್ಟ ಅಳಿಯಕಟ್ಟು ಸಂಸ್ಕೃತಿ ದೈವರಾದನೆ ಮತ್ತು ಇತರ ಆಚರಣೆಗಳ ಬಗ್ಗೆ ಮಾಹಿತಿಯನ್ನು ಒದಗಿಸಿದರು. ಯೋಗೀಶ್ ಆಳ್ವ ಸಾಲೆತ್ತೂರು ಮತ್ತು ಬಳಗದವರ ಸಂಗೀತ ರಸ ಸಂಜೆ ಕಾರ್ಯಕ್ರಮ ಹಾಗೂ ಕಲ್ಲಡ್ಕ ವಲಯ ಡ್ಯಾನ್ಸ್ ತಂಡದಿಂದ ನೃತ್ಯ ಕಾರ್ಯಕ್ರಮ ಕುಮಾರಿ ಮಾನ್ವಿ ಶೆಟ್ಟಿಯವರ ನಿರೂಪಣೆಯೊಂದಿಗೆ ಜರಗಿತು. ನಂತರ ವಲಯ ಬಂಟರ ಸಂಘದ ಅಧ್ಯಕ್ಷರಾದ ಗಣೇಶ್ ಶೆಟ್ಟಿ ಗೋಳ್ತಮಜಲು ರವರ ಅಧ್ಯಕ್ಷತೆಯಲ್ಲಿ ನಡೆದ ಸಾಧಕರಿಗೆ ಸನ್ಮಾನ ಮತ್ತು ಸಭಾ ಕಾರ್ಯಕ್ರಮ ನಡೆಯಿತು.
ಬಂಟ್ವಾಳ ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ದೈಹಿಕ ಶಿಕ್ಷಕ ಜಗದೀಶ್ ರೈ ನಡುವಳಚ್ಚಿಲು, ಲೆಕ್ಕಪರಿಶೋಧಕ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಹಾರ್ದಿಕ್ ಶೆಟ್ಟಿ ಬೊಂಡಾಲ, ದೈಹಿಕ ಶಿಕ್ಷಕರಾದ ಅಜಿತ್ ಕುಮಾರ್ ರೈ,ಪ್ರಗತಿಪರ ಕೃಷಿಕ ಆನಂದ ಶೆಟ್ಟಿ ಕಾಂಪ್ರಬೈಲು ರವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಗೌರವ ಉಪಸ್ಥಿತರಿದ್ದ ಬಂಟ್ವಾಳ ತಾಲೂಕು ಬಂಟರ ಸಂಘದ ಅಧ್ಯಕ್ಷರಾದ ಜಗನ್ನಾಥ ಚೌಟ ಬದಿಗುಡ್ಡೆರವರು ಬಂಟರ ಸಂಸ್ಕೃತಿಯ ಉಳಿವಿನ ಅವಶ್ಯಕತೆಯ ಬಗ್ಗೆ ಮಾಹಿತಿಯನ್ನು ಒದಗಿಸಿದರು. ಸಭೆಯಲ್ಲಿ ದುರ್ಗಾ ಫೆಸಿಲಿಟಿ ಅಂಡ್ ಮ್ಯಾನೇಜ್ಮೆಂಟ್ ಸರ್ವಿಸಸ್ ಇದರ ಮಾಲಕರಾದ ಸಚ್ಚಿದಾನಂದ ಶೆಟ್ಟಿ ಬೊಂಡಾಲ, ಬಂಟ್ವಾಳ ತಾಲೂಕು ಬಂಟರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಬಾಲಕೃಷ್ಣ ಆಳ್ವ ಬೊಂಡಾಲ, ಮಹಿಳಾ ಸಮಿತಿ ಅಧ್ಯಕ್ಧೆಯಾಗಿರುವ ನೀನಾ ಯು ರೈ , ಕಲ್ಲಡ್ಕ ವಲಯದ ಗ್ರಾಮ ಸಮಿತಿಯ ಅಧ್ಯಕ್ಷರುಗಳಾದ ರಾಮಣ್ಣ ಶೆಟ್ಟಿ ಬಾಳ್ತಿಲ, ಪೃಥ್ವಿ ರಾಜ್ ಆಳ್ವ ಅಮ್ಟೂರು, ಪ್ರಿತೇಶ್ ಮಾಣೈ ಬೊಂಡಾಲ, ಪ್ರೇಮನಾಥ್ ಶೆಟ್ಟಿ ಅಂತರ, ಸಂದೀಪ್ ಶೆಟ್ಟಿ ಅರೆಬೆಟ್ಟು, ಅಶೋಕ್ ಆಳ್ವ ಕೊಳಕೀರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ತಾಲೂಕು ಯುವ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಸುನಾದ್ ರಾಜ್ ಶೆಟ್ಟಿ ಸ್ವಾಗತಿಸಿ, ಕಲ್ಲಡ್ಕ ವಲಯದ ಸಾಂಸ್ಕೃತಿಕ ಕಾರ್ಯದರ್ಶಿ ಮಹೇಶ್ ಶೆಟ್ಟಿ ನೆಟ್ಲ ವಂದಿಸಿ, ಕಲ್ಲಡ್ಕ ವಲಯದ ಪ್ರಧಾನ ಕಾರ್ಯದರ್ಶಿ ನಾಗೇಶ್ ಶೆಟ್ಟಿ ಬೊಂಡಾಲ ನಿರೂಪಿಸಿದರು.








