Friday, April 26, 2024
spot_imgspot_img
spot_imgspot_img

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬಂಟ್ವಾಳ ತಾಲೂಕು ಅಭ್ಯಾಸವರ್ಗ -2020

- Advertisement -G L Acharya panikkar
- Advertisement -

ಬಂಟ್ವಾಳ(ನ.8): ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬಂಟ್ವಾಳ ತಾಲೂಕು 2020ರ ಅಭ್ಯಾಸವರ್ಗವು ಸಿದ್ದಕಟ್ಟೆ ಯ ಹರ್ಷಲಿ ಸಭಾಭವನದಲ್ಲಿ ನಡೆಯಿತು.

ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿವೇಕಾನಂದ ವಿದ್ಯಾವರ್ಧಕ ಸಂಘ ದ ಅಧ್ಯಕ್ಷರು ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯರಾದ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ರವರು ಇಡೀ ವಿಶ್ವದ ಅತ್ಯಂತ ದೊಡ್ಡ ವಿದ್ಯಾರ್ಥಿ ಸಂಘಟನೆಯಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಇಂದು ವ್ಯಕ್ತಿ ನಿರ್ಮಾಣದ ಮೂಲಕ ರಾಷ್ಟ್ರ ನಿರ್ಮಾಣದ ಕಾರ್ಯವನ್ನು ಮಾಡುತ್ತಾ ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯತೆ ಹಾಗೂ ಸಂಸ್ಕೃತಿ ಯ ಬಗೆಗಿನ ಪ್ರಜ್ಞೆ ಮೂಡಿಸುವ ಕಾರ್ಯ ಮಾಡುತ್ತಿದೆ ಎಂದರು.

ಅದೇ ವೇದಿಕೆಯಲ್ಲಿ ಕಂಬಳ ಓಟಗಾರಿಕೆಯ ಮೂಲಕ ಪ್ರಸಿದ್ಧಿ ಪಡೆದು ಕರ್ನಾಟಕ ದ ಪ್ರತಿಷ್ಟಿತ ಕರ್ನಾಟಕ ಕ್ರೀಡಾ ರತ್ನ ಪುರಸ್ಕೃತ ಸುರೇಶ್ ಎಂ.ಶೆಟ್ಟಿ ಹಕ್ಕೇರಿ ಇವರನ್ನು ಸನ್ಮಾನಿಸಲಾಯಿತು. ಅಭ್ಯಾಸವರ್ಗದ ಪ್ರಥಮ ಅವಧಿ ಶಾಖೆ ಮತ್ತು ಸಂಚಲನವನ್ನು ಮಂಗಳೂರು ವಿಭಾಗ ಸಂಘಟನಾ ಕಾರ್ಯದರ್ಶಿಗಳಾದ ಶ್ರೀಯುತ ಬಸವೇಶ್ ಕೋರಿ ತೆಗೆದುಕೊಂಡರು.ಅಭ್ಯಾಸ ವರ್ಗದ ದ್ವಿತೀಯ ಅವಧಿ ಸೈದ್ದಾಂತಿಕ ಭೂಮಿಕೆ ಯನ್ನು ವಿದ್ಯಾರ್ಥಿ ಪರಿಷತ್ ನ ಮಂಗಳೂರು ವಿಭಾಗ ಪ್ರಮುಖರಾದ ಕೇಶವ ಬಂಗೇರರವರು ತೆಗೆದುಕೊಂಡರು.

ಅಭ್ಯಾಸವರ್ಗದ ತೃತೀಯ ಅವಧಿಯನ್ನು ವಿದ್ಯಾರ್ಥಿ ಪರಿಷತ್ ನ ಹಿರಿಯ ಕಾರ್ಯಕರ್ತರಾದ ಶೀತಲ್ ಕುಮಾರ್ ಜೈನ್ ಕಾರ್ಕಳ ತೆಗೆದುಕೊಂಡರು.ಅಭ್ಯಾಸವರ್ಗದ ಸಮಾರೋಪ ಸಮಾರಂಭದಲ್ಲಿ ಬಂಟ್ವಾಳ ಹಾಗೂ ಸಿದ್ದಕಟ್ಟೆ ನಗರದ ನೂತನ ಕಾರ್ಯಕಾರಿಣಿ ಯನ್ನು ವಿಭಾಗ ಸಂಘಟನಾ ಕಾರ್ಯದರ್ಶಿಗಳಾದ ಬಸವೇಶ್ ಕೋರಿ ಘೋಷಿಸಿದರು .ಸಮಾರೋಪದಲ್ಲಿ ವಿಭಾಗ ಸಂಚಾಲಕರಾದ ಆಶಿಶ್ ಅಜ್ಜಿಬೆಟ್ಟು ಜಿಲ್ಲಾ ಸಂಚಾಲಕರಾದ ಸಂದೇಶ್ ರೈ ಮಜಕ್ಕಾರ್ ಉಪಸ್ಥಿತರಿದ್ದರು.ಅಭ್ಯಾಸ ವರ್ಗದಲ್ಲಿ ಸಿದ್ದಕಟ್ಟೆ ಪರಿಸರದ ವಿದ್ಯಾರ್ಥಿ ಪರಿಷತ್ ನ ಹಿತೈಷಿಗಳಾದ ರತ್ನ ಕುಮಾರ್ ಚೌಟ, ಪ್ರಭಾಕರ ಪ್ರಭು, ಉಮೇಶ್ ಗೌಡ , ದೀಪಕ್ ಶೆಟ್ಟಿಗಾರ್ , ಶ್ರೀಮತಿ ಮಂದಾರತಿ , ಮಾಧವ ಶೆಟ್ಟಿಗಾರ್ , ವಿಶ್ವನಾಥ ಶೆಟ್ಟಿಗಾರ್ ,ಮಹೇಶ್ ಕರ್ಕೇರ ,ಸತೀಶ್ ಪೂಜಾರಿ ಅಳಕೆ,ರಾಜೇಶ್ ಕೊನೆರೊಟ್ಟು ಮುಂತಾದ ಗಣ್ಯರು ಉಪಸ್ಥಿತರಿದ್ದರು.

- Advertisement -

Related news

error: Content is protected !!