Sunday, July 26, 2026
spot_imgspot_img
spot_imgspot_img

ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿ ಪಿಕಪ್ ಡಿಕ್ಕಿ: ಪಾದಚಾರಿ ಮೃತ್ಯು

- Advertisement -
- Advertisement -

ಬಂಟ್ವಾಳ : ಚಾಲಕನ ನಿಯಂತ್ರಣ ತಪ್ಪಿ ಪಿಕಪ್ ವಾಹನ ಉರುಳಿ ಪಾದಚಾರಿ ಮೃತಪಟ್ಟು, ಓರ್ವ ಗಾಯಗೊಂಡಿರುವ ಘಟನೆ ಬಂಟ್ವಾಳದ ಅಜ್ಜಿಬೆಟ್ಟು ಗ್ರಾಮದ ದೇರೊಟ್ಟು ಎಂಬಲ್ಲಿ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ಗೋಪಾಲ ಶೆಟ್ಟಿಗಾ‌ರ್ (60) ಎಂದು ಗುರುತಿಸಲಾಗಿದೆ.

ಪಿಕಪ್ ಹಿಂದಕ್ಕೆ ಚಲಿಸಿದಾಗ ಹಿಂದಿನಿಂದ ನಡೆದುಕೊಂಡು ಬರುತ್ತಿದ್ದ ಗೋಪಾಲ್ ಶೆಟ್ಟಿಗಾ‌ರ್ ಮೇಲೆ ಮಗುಚಿ ಬಿದ್ದಿದ್ದು, ವಾಹನದ ಅಡಿಯಲ್ಲಿ ಸಿಲುಕಿಕೊಂಡು ಗಂಭೀರ ಗಾಯಗೊಂಡ ಗೋಪಾಲ ಶೆಟ್ಟಿಗಾರ್‌ರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅದಾಗಲೇ ಪ್ರಾಣಪಕ್ಷಿ ಹಾರಿಹೋಗಿತ್ತು.

ದೇರೊಟ್ಟು ಎಂಬಲ್ಲಿ ಸಾಮಾಗ್ರಿಗಳನ್ನು ಸಾಗಾಟ ಮಾಡುತ್ತಿದ್ದ ವೇಳೆ ಚಡವಿನಲ್ಲಿ ವಾಹನವು ಹಿಂದಕ್ಕೆ ಚಲಿಸಿದಾಗ ವಾಹನವನ್ನು ಬ್ರೇಕ್ ಹಾಕಿ ನಿಯಂತ್ರಿಸಲಾಗದೆ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.

- Advertisement -

Related news

error: Content is protected !!