Friday, April 26, 2024
spot_imgspot_img
spot_imgspot_img

ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ)ಎಮರ್ಜೆನ್ಸಿ ಹೆಲ್ಪ್ ಲೈನ್,ಫ್ರೆಂಡ್ಸ್‌ ಟಿಪ್ಪು ನಗರ ಎರಡು ವಾಟ್ಸಾಪ್ ಗ್ರೂಪ್ ಜಂಟಿ ಆಶ್ರಯದಲ್ಲಿ ರಕ್ತದಾನ ಶಿಬಿರ.

- Advertisement -G L Acharya panikkar
- Advertisement -

ಬಂಟ್ವಾಳ: ಬಂಟ್ವಾಳದ ಲೊರೆಟ್ಟೊ ಪದವು ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ)ಎಮರ್ಜೆನ್ಸಿ ಹೆಲ್ಪ್ ಲೈನ್, ಫ್ರೆಂಡ್ಸ್‌ ಟಿಪ್ಪು ನಗರ ಎರಡು ವಾಟ್ಸಾಪ್ ಗ್ರೂಪ್ ಜಂಟಿ ಆಶ್ರಯದಲ್ಲಿ ಕೆ್ಎಂಸಿ ಆಸ್ಪತ್ರೆ ಮಂಗಳೂರು ಇದರ ಸಹಭಾಗಿತ್ವದಲ್ಲಿ ಸಾರ್ವಜನಿಕ ರಕ್ತದಾನ ಶಿಬಿರವು ದಿನಾಂಕ 15/11/2020 ನೇ ಆದಿತ್ಯವಾರದಂದು ಲೊರೆಟ್ಟೆ ಪದವು ಟಿಪ್ಪುನಗರದ ಇರ್ಷಾದುಸ್ಸಿಬಿಯಾನ್ ಮದ್ರಸ ಸಭಾಂಗಣದಲ್ಲಿ ನಡೆಯಿತು.

ಬದ್ರಿಯಾ ಜುಮಾ ಮಸೀದಿ ಟಿಪ್ಪು ನಗರ ಮಾಜಿ ಖತೀಬರಾದ ಬಹು|ಹಾಜಿ ಕೆ.ಎಮ್.ಅಬ್ದುಲಾ ಮೌಲವಿ ಉಸ್ತಾದರ ದುಃವಾಶೀರ್ವಚನದ ಮೂಲಕ ಚಾಲನೆ ನೀಡಿ ಶಿಬಿರವನ್ನು ಉದ್ಘಾಟಿಸಿದರು.

ರಕ್ತದಾನ ಶಿಬಿರದಲ್ಲಿ ಎಲ್ಲಾ ಸುರಕ್ಷಿತಾ ಮುನ್ನೆಚ್ಚರಿಕೆಯನ್ನು ಪಾಲಿಸಿ ಕೊಂಡು ಒಟ್ಟು 52 ಮಂದಿ ರಕ್ತದಾನ ಮಾಡಿ್ದರು. ದಾನಿಗಳಿಂದ ರಕ್ತ ಸಂಗ್ರಹಿಸುವಲ್ಲಿ ಕೆ್ಎಂಸಿ ಆಸ್ಪತ್ರೆ ಮಂಗಳೂರು ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಸಹಕರಿಸಿದರು.

ಮುಖ್ಯ ಅತಿಥಿಗಳಾಗಿ ಆಸೀಪ್ ಆಪತ್ಬಾಂಧವ,ಅಬೂಬಕ್ಕರ್ ಉಳ್ಳಾಲ,ರಾಜ ಚಂಡ್ತಿಮಾರ್,ಐಶಾಕ್ ವಾಝ್,ಸುಲೈಮಾನ್,ರಫೀಕ್ ಮಾಸ್ಟರ್,ಇಕ್ಬಾಲ್ ಕನಕಮಜಲ್,ಮಹಮ್ಮದ್ ಹಾಜಿ ಕುಕ್ಕುವಳ್ಳಿ,ಮೂನೀಶ್ ಬಂಟ್ವಾಳ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ(ರಿ) ಇದರ ಕಾರ್ಯ ನಿರ್ವಾಹಕರು ಉಪಸ್ಥಿತರಿದ್ದರು.

ಸಮಾಜ ಸೇವೆಯಲ್ಲಿ ಸದಾ ಮಂಚೂಣಿಯಲ್ಲಿರುವ ಎಮರ್ಜನ್ಸಿ ಹೆಲ್ಪ್ ಲೈನ್ ಹಾಗೂ ಫ್ರೆಂಡ್ಸ್ ಟಿಪ್ಪುನಗರ ಎರಡು ವಾಟ್ಸಾಪ್ ಗ್ರೂಪ್ ಇದರ ಸೇವೆಯನ್ನು ಗುರುತಿಸಿ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ(ರಿ) ಸಂಸ್ಥೆಯ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಶಿಬಿರದಲ್ಲಿ 27 ನೇ ಬಾರಿ ರಕ್ತದಾನ ಮಾಡಿದ ಆಶಿಕ್ ಟಿಪ್ಪುನಗರ(ಸದಸ್ಯರು ಎಮರ್ಜನ್ಸಿ ಹೆಲ್ಪ್ ಲೈನ್) ರವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ಅಶ್ರಪ್ ಅರಬಿ ಕಲ್ಲಡ್ಕ ಕಾರ್ಯಕ್ರಮವನ್ನು ನಿರೂಪಿಸಿದರು.

- Advertisement -

Related news

error: Content is protected !!