Sunday, June 7, 2026
spot_imgspot_img
spot_imgspot_img

ಬಂಟ್ವಾಳ: ಬಾಲಕ ನಾಪತ್ತೆ ಪ್ರಕರಣ ಸುಖಾಂತ್ಯ..! ತಮ್ಮನಿಗೆ ತಿಂಡಿ ತರುತ್ತೇನೆ ಎಂದು ಪೇಟೆಗೆ ತೆರಳಿದ್ದವ ಸುರಕ್ಷಿತವಾಗಿ ಮನೆಗೆ ವಾಪಸ್

- Advertisement -
- Advertisement -

ಬಂಟ್ವಾಳ: ತಮ್ಮನಿಗೆ ತಿಂಡಿ ತರುತ್ತೇನೆ ಎಂದು ತಿಳಿಸಿ ಪೇಟೆಗೆ ಹೋದವ ವಾಪಾಸು ಮನೆಗೆ ಬರದೆ ಮನೆಯವರಲ್ಲಿ ಭಯ ಹುಟ್ಟಿಸಿ ಬಾಲಕ ಸುರಕ್ಷಿತವಾಗಿ ಮನೆ ತಲುಪಿದ್ದು ಎಲ್ಲ ಆತಂಕಕ್ಕೆ ತೆರೆ ಬಿದ್ದಿದೆ.

ಬಿಸಿರೋಡು ಬಸ್ ನಿಲ್ದಾಣದ ಹಿಂಬದಿಯ ಬಾಡಿಗೆ ಮನೆಯಲ್ಲಿ ವಾಸ ಮಾಡುವ ಗಣೇಶ್ ಎಂಬವರ ಮಗ ದ್ಯಾನ್ (13) ಎಂಬಾತ ಮನೆಯಿಂದ ಹೊರಗೆ ಹೋಗಿ ಸಾಕಷ್ಟು ಗೊಂದಲ ಮೂಡಿಸಿದ ಬಾಲಕ. ಆತ ಬಿಸಿರೋಡಿನಿಂದ ನಡೆದುಕೊಂಡು ಹೋಗುವ ದೃಶ್ಯ ಸಿ‌ಸಿ.ಟಿ.ವಿಯಲ್ಲಿ ಪತ್ತೆಯಾಗಿತ್ತು. ಅದರಂತೆ ಮನೆಯವರು ಹಾಗೂ ಸಾರ್ವಜನಿಕ ರು ಹುಡುಕಾಟ ನಡೆಸಿದ್ದರು.

ಈತ ನಡೆದುಕೊಂಡೆ ಅಮ್ಟಾಡಿ ಸಮೀಪದ ಗೋರೆಮಾರ್ ಎಂಬಲ್ಲಿ ಹೋಗುತ್ತಿರುವುದು ಗಮನಕ್ಕೆ ಬಂದು ರಿಕ್ಷಾ ಚಾಲಕರೋರ್ವನು ಮನೆಯವರಿಗೆ ತಿಳಿಸಿದ್ದಾರೆ. ಕೂಡಲೇ ಮನೆಯವರು ಹೋಗಿ ಬಾಲಕನನ್ನು ಮನೆಗೆ ಸುರಕ್ಷಿತವಾಗಿ ಮನೆಗೆ ಕರೆದುಕೊಂಡು ಬಂದಿದ್ದಾರೆ.

ದ್ಯಾನ್ ಅವರು ತಮ್ಮನ ಜೊತೆ ಶಾಲೆಯಿಂದ ಮನೆಗೆ ಬಂದವನು ಅಲ್ಲಿಂದ ತಿಂಡಿ ತರುತ್ತೇನೆ ಎಂದು ಸಂಜೆ 5 ಗಂಟೆಗೆ ಮನೆಯಿಂದ ಹೊರಗೆ ಹೋದವನು ರಾತ್ರಿ 8 ಗಂಟೆಯಾಗುತ್ತ ಬಂದರೂ ಮನೆಗೆ ಬಂದಿರಲಿಲ್ಲ. ಹೀಗಾಗಿ ಮನೆಯವರು ಹಾಗೂ ಪರಿಸರದ ಸಾರ್ವಜನಿಕ ರು ಜೊತೆಯಾಗಿ ಸಿ.ಸಿ.ಕ್ಯಾಮರಾ ದಲ್ಲಿ ಹಾಗೂ ಇತರ ಕಡೆಗಳಲ್ಲಿ ಹುಡುಕಾಟ ನಡೆಸಿದ ಬಳಿಕ ಸುರಕ್ಷಿತವಾಗಿ ಮನೆ ತಲುಪಿದ್ದಾನೆ.

- Advertisement -

Related news

error: Content is protected !!