- Advertisement -
- Advertisement -
ಬ್ರಹ್ಮಾವರ: ಕ್ಯಾಶ್ಯೂ ಫಾಕ್ಟರಿಯೊಂದರಲ್ಲಿ 15 ಲಕ್ಷ ರೂ. ಬೆಲೆಬಾಳುವ ವಸ್ತುಗಳು ಕಳವಾಗಿರುವ ಘಟನೆ ಕಾಡೂರು ಗ್ರಾಮದ ಮುಂಡಾಡಿ ಎಂಬಲ್ಲಿ ನಡೆದಿದೆ.
ಪಾಲುದಾರ ಪ್ರವೀಣ್ ಕುಮಾರ್ ರವರು ಸೋಮವಾರ ಬೆಳಗ್ಗೆ ಫ್ಯಾಕ್ಟರಿ ಸಮೀಪ ಹೋದಾಗ ಶಂಕರ ಮತ್ತು ಉಮೇಶ್ ಹಿಂಬದಿ ಬಾಗಿಲು ಮುರಿದು ಮೆಷಿನರಿ ಮತ್ತು ಸಲಕರಣೆಗಳನ್ನು ತೆಗೆಯುತ್ತಿದ್ದು, ತನ್ನನ್ನು ನೋಡಿ ಪರಾರಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.
ಅನಂತರ ಫ್ಯಾಕ್ಟರಿ ಒಳಗೆ ಹೋಗಿ ಪರಿಶೀಲಿಸುವಾಗ ಸೊತ್ತು ಕಳವಾಗಿರುವುದು ಕಂಡು ಬಂದಿರುವುದಾಗಿ ಅವರು ಬ್ರಹ್ಮಾವರ ಠಾಣೆಗೆ ದೂರು ನೀಡಿದ್ದಾರೆ.
ಈ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -