Monday, June 8, 2026
spot_imgspot_img
spot_imgspot_img

ಬಂಟ್ವಾಳ: ತಲೆದಿಂಬು, ಹಾಸಿಗೆ ತಯಾರಿಕಾ ಪ್ಯಾಕ್ಟರಿಯಲ್ಲಿ ಅಗ್ನಿ ಅವಘಡ: ಲಕ್ಷಾಂತರ ರೂ. ನಷ್ಟ

- Advertisement -
- Advertisement -

ಬಂಟ್ವಾಳ: ತಲೆದಿಂಬು ಹಾಗೂ ಹಾಸಿಗೆ ತಯಾರಿಕಾ ಪ್ಯಾಕ್ಟರಿಯೊಂದಕ್ಕೆ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದ ಘಟನೆ ಸಜೀಪ ಗ್ರಾಮದ ಆಲಾಡಿ ಸಮೀಪದ ಮುಂಡಕೋಡಿನಲ್ಲಿ ನಡೆದಿದೆ.

ಈ ಪ್ಯಾಕ್ಟರಿ ಸಜೀಪ ನಿವಾಸಿ ಲತೀಫ್ ಎಂಬವರಿಗೆ ಸೇರಿದ್ದು, ಪ್ಯಾಕ್ಟರಿಯೊಳಗೆ ಲಕ್ಷಾಂತರ ರೂ.ಮೌಲ್ಯದ ಮೆಷಿನರಿಗಳು, ತಲೆದಿಂಬು ಹಾಗೂ ಹಾಸಿಗೆಗಳು ಇದ್ದವು ಎನ್ನಲಾಗುತ್ತಿದೆ.

ಸದ್ಯ ದಾಸ್ತಾನು ಕೊಠಡಿಗೆ ತಗಲಿರುವ ಬೆಂಕಿಯನ್ನು ನೀರು ಹಾಕಿ ಆರಿಸಲಾಗಿದೆ. ಸ್ಥಳಕ್ಕೆ ಬಂಟ್ವಾಳದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಧಾವಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

- Advertisement -

Related news

error: Content is protected !!