Thursday, June 4, 2026
spot_imgspot_img
spot_imgspot_img

ಬಂಟ್ವಾಳ: ಹಿಟಾಚಿ ಸಾಗಿಸುತ್ತಿದ್ದ ಟಿಪ್ಪರ್ ಮನೆಯ ಮೇಲೆ ಬಿದ್ದು ಹಾನಿ; ಓರ್ವ ಗಂಭೀರ!

- Advertisement -
- Advertisement -

ಬಂಟ್ವಾಳ: ಹಿಟಾಚಿ ಸಾಗಿಸುತ್ತಿದ್ದ ಟಿಪ್ಪರೊಂದು ಹಿಟಾಚಿ ಸಹಿತ ಮನೆಯ ಮೇಲೆ ಬಿದ್ದಿರುವ ಘಟನೆ ಅಮ್ಟಾಡಿಯ ಕೆಂಪುಗುಡ್ಡೆ ಕ್ರಾಸ್ ಬಳಿ ನಡೆದಿದೆ. ಟಿಪ್ಪರ್ ನಲ್ಲಿದ್ದ ವ್ಯಕ್ತಿ ಗಂಭೀರ ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ.

ಟಿಪ್ಪರ್ ಕೆಳಗಡೆ ಸಿಲುಕಿಕೊಂಡಿದ್ದ ವಿಠಲ್ ಅವರನ್ನು ಬಿ.ಸಿ.ರೋಡಿನ ವಿಜಯಲಕ್ಷ್ಮಿ ಕ್ರೇನ್ ತಕ್ಷಣ ಸ್ಥಳಕ್ಕೆ ತೆರಳಿ ಟಿಪ್ಪರನ್ನು ಮೇಲಕ್ಕೆತ್ತಿದ್ದು, ಬಳಿಕ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಯಲ್ಲಿ ನಾರಾಯಣ ಭಂಡಾರಿ ಅವರ ಮನೆ ಸಂಪೂರ್ಣ ಜಖಂಗೊಂಡಿದ್ದು, ಮನೆ ಮಂದಿಗೆ ಹಾನಿಯಾಗಿಲ್ಲ. ಹೆಚ್ಚಿನ ವಿವರ ಇನ್ನಷ್ಟೇ ತಿಳಿದುಬರಬೇಕಿದೆ.

- Advertisement -

Related news

error: Content is protected !!