- Advertisement -
- Advertisement -




ಬಂಟ್ವಾಳ: ಮೈಮೇಲೆ ಮರದ ಗೆಲ್ಲು ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಲಾರಿ ಚಾಲಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಬಂಟ್ವಾಳದಲ್ಲಿ ನಡೆದಿದೆ
ಮೃತಪಟ್ಟ ವ್ಯಕ್ತಿಯನ್ನು ಪೆರಾಜೆ ಗ್ರಾಮದ ಕುಡೋಲು ಜಗದೀಶ್ ಗೌಡ (50) ಎಂದು ಗುರುತಿಸಲಾಗಿದೆ.
ಇವರು ಮೂಡಬಿದಿರೆಯ ಫೀಡ್ ತಯಾರಿಕೆ ಮಾಡುವ ಖಾಸಗಿ ಕಂಪೆನಿಯೊಂದರಲ್ಲಿ ಲಾರಿ ಚಾಲಕ ವೃತ್ತಿಯನ್ನು ಮಾಡುತ್ತಿದ್ದು, ಕಂಪೆನಿಯಿಂದ ಫೀಡ್ ಲೋಡ್ ಮಾಡಿ ಕಾಸರಗೋಡು ಜಿಲ್ಲೆಗೆ ಹೋಗಿದ್ದರು. ಕಾಸರಗೋಡು ಜಿಲ್ಲೆಯ ಬದಿಯಡ್ಕದಲ್ಲಿ ರಸ್ತೆಯಲ್ಲಿ ಅಡ್ಡಲಾಗಿ ಇದ್ದ ಮರದ ಗೆಲ್ಲನ್ನು ಬದಿಗೆ ಸರಿಸಲು ಲಾರಿಯಿಂದ ಕೆಳಗೆ ಇಳಿದಿದ್ದ ಸಂದರ್ಭದಲ್ಲಿ ಮತ್ತೊಂದು ಗೆಲ್ಲು ಇವರ ಮೈಮೇಲೆ ಬಿದ್ದಿದೆ ಎನ್ನಲಾಗಿದೆ.
ಇದರಿಂದ ಗಂಭೀರ ಗಾಯಗೊಂಡ ಅವರನ್ನು ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಚಿಕಿತ್ಸೆಗೆ ಸ್ಪಂದಿಸಿದೆ ಮೃತಪಟ್ಟಿದ್ದಾರೆ. ಕಾಸರಗೋಡು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -








