Friday, March 29, 2024
spot_imgspot_img
spot_imgspot_img

ಮಂಗಳೂರು: ಗುಡ್ಡ ಕುಸಿತದಿಂದ ಮಣ್ಣಿನಡಿಗೆ ಬಿದ್ದ ಕಾರ್ಮಿಕ; ಅದೃಷ್ಟವಶಾತ್ ಅಪಾಯದಿಂದ ಪಾರು

- Advertisement -G L Acharya panikkar
- Advertisement -

ಮಂಗಳೂರು: ರಸ್ತೆ ಬದಿಯ ತಡೆಗೋಡೆ ನಿರ್ಮಾಣ ಕಾಮಗಾರಿ ವೇಳೆ ಗುಡ್ಡ ಕುಸಿದ ಪರಿಣಾಮ ಕಾರ್ಮಿಕನೊಬ್ಬ ಮಣ್ಣಿನಡಿಗೆ ಬಿದ್ದ ಘಟನೆ ತಾಲೂಕಿನ ಮುತ್ತೂರು ಗ್ರಾಪಂ ವ್ಯಾಪ್ತಿಯ ಮಾರ್ಗದಂಗಡಿ-ನೋಣಾಲ್‌ ನಲ್ಲಿ ನಡೆದಿದೆ.

ಅಪಾಯದಿಂದ ಪಾರಾದ ಕಾರ್ಮಿಕನನ್ನು ಅರಳ ಗ್ರಾಮದ ರಾಜೇಶ್ ಪೂಜಾರಿ (28) ಎಂದು ಗುರುತಿಸಲಾಗಿದೆ.

ಗುಡ್ಡಕುಸಿತ ತಡೆಯಲು ಗಂಜಿಮಠದಿಂದ ಮೂಲರಪಟ್ಣಕ್ಕೆ ಸಂಪರ್ಕ ಕಲ್ಪಿಸುವ ಒಳ ರಸ್ತೆಯ ಒಂದೆರಡು ಕಡೆ ತಡೆಗೋಡೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ನೋಣಾಲ್ ಬಳಿ ರಾಜೇಶ್ ಸಹಿತ ಇಬ್ಬರು ತಡೆಗೋಡೆ ಕಾಮಗಾರಿ ನಡೆಸುತ್ತಿದ್ದಾಗ ತಡೆಗೋಡೆಯೊಂದಿಗೆ ಗುಡ್ಡ ಕುಸಿದಿದ್ದು, ಈ ವೇಳೆ ಮಣ್ಣಿನಡಿಗೆ ಬಿದ್ದ ರಾಜೇಶ್‌ರ ತಲೆ ಮಾತ್ರ ಹೊರಗೆ ಕಾಣುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಘಟನೆ ನಡೆದ ವೇಳೆ ತಕ್ಷಣ ಸ್ಥಳೀಯರು ಜೆಸಿಬಿ ಬಳಸಿ ಮಣ್ಣು ತೆರವುಗೊಳಿಸಿದ 2 ಗಂಟೆಯ ಕಾಲ ನಡೆದ ಕಾರ್ಯಾಚರಣೆಯಲ್ಲಿ ರಾಜೇಶ್ ಪೂಜಾರಿಯನ್ನು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.

ಕೆಲವು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಗೆ ಗುಡ್ಡ ಕುಸಿತಗೊಂಡಿದ್ದು, ಮತ್ತಷ್ಟು ಅಪಾಯ ಸಂಭವಿಸುವ ಮುನ್ನ ಸಂಬಂಧಪಟ್ಟ ಇಲಾಖಾಧಿಕಾರಿಗಳು, ಜನಪ್ರತಿನಿಧಿಗಳು ಮುನ್ನೆಚ್ಚರಿಕೆ ವಹಿಸುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ.

- Advertisement -

Related news

error: Content is protected !!