Sunday, May 19, 2024
spot_imgspot_img
spot_imgspot_img

ಬಂಟ್ವಾಳ: ಓಮ್ನಿ – ಸ್ವಿಫ್ಟ್ ಕಾರು ನಡುವೆ ಅಪಘಾತ; ಹಲವರಿಗೆ ಗಂಭೀರ ಗಾಯ

- Advertisement -G L Acharya panikkar
- Advertisement -

ಬಂಟ್ವಾಳ: ಓಮ್ನಿ ಕಾರಿಗೆ ಹಿಂಬದಿಯಿಂದ ಬಂದ ಸ್ವಿಫ್ಟ್ ಕಾರು ಡಿಕ್ಕಿಯಾದ ಘಟನೆ ನಡೆದಿದೆ. ಬಿಸಿರೋಡು ಬೆಳ್ತಂಗಡಿ ರಾಜ್ಯ ಹೆದ್ದಾರಿಯ ಪರ್ಲ ಚರ್ಚ್ ಸಮೀಪ ನಡೆದಿದೆ. ಡಿಕ್ಕಿಯ ರಭಸಕ್ಕೆ ಒಮ್ನಿ ಕಾರು ಪಲ್ಟಿಯಾಗಿ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಓಮ್ನಿ ಕಾರು ಚಾಲಕ ರಾಯಿಸನ್ ಹಾಗೂ ಜೊತೆಯಲ್ಲಿ ಮಕ್ಕಳು ಸಹಿತ ಮೂರು ಜನ ಹಾಗೂ ಸ್ವಿಫ್ಟ್ ಕಾರು ಚಾಲಕ ಆದಿಲ್ ಎಂಬವರಿಗೂ ಗಾಯವಾಗಿದೆ.

ಎರಡು ಕಾರುಗಳು ವಗ್ಗದಿಂದ ಬರುತ್ತಿದ್ದು, ಪರ್ಲ ಚರ್ಚ್ ಬಳಿಗೆ ಬರುತ್ತಿದ್ದಂತೆ ಒಮ್ನಿ ಕಾರು ಚರ್ಚ್ ಗೆ ಹೋಗುವ ಉದ್ದೇಶದಿಂದ ಕಾರನ್ನು ತಿರುಗಿಸುವ ವೇಳೆ ವೇಗವಾಗಿ ಬಂದ ಸ್ವಿಫ್ಟ್ ಕಾರು ಹಿಂಬದಿಯಿಂದ ಒಮ್ಮಿ ಕಾರಿಗೆ ಡಿಕ್ಕಿ ಹೊಡೆದಿದೆ.

ಇನ್ನು ಡಿಕ್ಕಿಯ ರಭಸಕ್ಕೆ ಒಮ್ನಿ ಕಾರನ್ನು ಸುಮಾರು ದೂರು ದೂಡಿಕೊಂಡು ಹೋಗಿದ್ದಲ್ಲದೆ ಕಾರು ಪಲ್ಟಿಯಾಗಿದೆ. ಕಾರಿನೊಳಗಿದ್ದ ಪ್ರಯಾಣಿಕರನ್ನು ಹಿಂಬದಿಯ ಗಾಜು ಒಡೆದು ಹೊರಕ್ಕೆ ತೆಗೆಯಲಾಗಿದೆ. ಘಟನಾ ಸ್ಥಳಕ್ಕೆ ಬಂಟ್ವಾಳ ಪೋಲೀಸರು ಭೇಟಿ ನೀಡಿದ್ದಾರೆ.

- Advertisement -

Related news

error: Content is protected !!