Thursday, April 25, 2024
spot_imgspot_img
spot_imgspot_img

ಬಂಟ್ವಾಳ ಗ್ರಾಮಾಂತರ ಹಾಗೂ ಡಿ.ಸಿ.ಐ.ಬಿ. ಪೊಲೀಸರಿಂದ ಇಸ್ಪೀಟು ಅಡ್ಡೆಗೆ ದಾಳಿ: ಆಟಕ್ಕೆ ಬಳಸಿದ್ದ ಲಕ್ಷಾಂತರ ರೂ.ವಶ, 16 ಮಂದಿ ಬಂಧನ*

- Advertisement -G L Acharya panikkar
- Advertisement -

ಬಂಟ್ವಾಳ: ಅಕ್ರಮವಾಗಿ ಗುಡ್ಡೆಯಲ್ಲಿ ಹಣವನ್ನು ಪಣವಾಗಿಟ್ಟುಕೊಂಡು ಇಸ್ಪೀಟು ಎಲೆಗಳನ್ನು ಇಟ್ಟು ಆಟ ಆಡುತ್ತಿದ್ದ ವೇಳೆ ಬಂಟ್ಚಾಳ ಗ್ರಾಮಾಂತರ ಪೋಲೀಸರು ಹಾಗೂ ಮಂಗಳೂರು ಡಿ.ಸಿ.ಐ.ಬಿ.ಪೋಲೀಸರಿಂದ ದಾಳಿ ಲಕ್ಷಾಂತರ ರೂ ಹಾಗೂ ಆಟದಲ್ಲಿ ನಿರತರಾಗಿದ್ದ 16 ಜನರ ಬಂಧಿಸಿದ ಘಟನೆ ಇರಾದಲ್ಲಿ ನಡೆದಿದೆ.

ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆ ವ್ಯಾಪ್ತಿಯ ಇರಾ ಗ್ರಾಮದ ಇರಾ ಎಂಬಲ್ಲಿ ಗುಡ್ಡೆಯೊಂದರಲ್ಲಿ ಆಟ ಆಡುತ್ತಿದ್ದ ವೇಳೆ ಖಚಿತ ಮಾಹಿತಿ ಪಡೆದು ದಾಳಿ ನಡೆಸಿದ್ದಾರೆ. ದಾಳಿಯ ವೇಳೆ ಹಣವನ್ನು ಪಣವಾಗಿಟ್ಟುಕೊಂಡು ಇಸ್ಪೀಟು ಎಲೆಗಳ  ಆಟದಲ್ಲಿ ನಿರತರಾಗಿದ್ದ ಸುಮಾರು 16 ಮಂದಿಯನ್ನು ಪೋಲೀಸರು ಬಂಧಿಸಿದ್ದಾರೆ.ಅವರು ಆಟಕ್ಕೆ ಬಳಸಿದ 1,68,510 ರೂ ಹಣವನ್ನು ವಶಕ್ಕೆ ಪಡೆದ ಕೊಂಡಿದ್ದಾರೆ.

ಮಂಗಳೂರು ಎಸ್‌.ಪಿ‌. ಲಕ್ಮೀಪ್ರಸಾದ್ ಅವರ ನಿರ್ದೇಶನ ದಂತೆ, ಬಂಟ್ವಾಳ ಡಿ.ವೈ.ಎಸ್.ಪಿ.ಹಾಗೂ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್ ಅವರ ಮಾರ್ಗದರ್ಶನ ದಲ್ಲಿ ಬಂಟ್ವಾಳ ಅಪರಾಧ ವಿಭಾಗದ ಎಸ್.ಐ‌. ಸಂಜೀವ ಕೆ., ಡಿ.ಸಿ.ಐ.ಬಿ. ಇನ್ಸ್ ಪೆಕ್ಟರ್ ಚೆಲುವರಾಜು ಸಿಬ್ಬಂದಿ ಗಳಾದ ಉದಯ ಪ್ರವೀಣ್, ಲಕ್ಷಣ, ಪ್ರವೀಣ್, ಮತ್ತು ಬಂಟ್ವಾಳ ಪ್ರೋ.ಮಹಿಳಾ ಪಿ.ಎಸ್.ಐ.ನತ್ರೀನ್ ತಾಜ್ , ಬಂಟ್ವಾಳ ಗ್ರಾಮಾಂತರ ಪೋಲೀಸರಾದ ಜನಾರ್ದನ, ಸುರೇಶ್, ರಾಧಾಕೃಷ್ಣ, ಪುನೀತ್ ಕುಮಾರ್, ಮನೋಜ್, ಬಸವರಾಜ್, ಶಿವಕುಮಾರ್ ಕಾರ್ಯಚರಣೆ ನಡೆಸಿದ್ದರು.

- Advertisement -

Related news

error: Content is protected !!