- Advertisement -
- Advertisement -






ಬಂಟ್ವಾಳ: ಹಾವು ಕಡಿದು ಯುವಕನೋರ್ವ ಸಾವನ್ನಪ್ಪಿರುವ ಘಟನೆ ಬಂಟ್ವಾಳ ತಾಲೂಕಿನ ತೆಂಕಕಜೆಕಾರು ಗ್ರಾಮದ ಪಾದೆಮನೆ ಎಂಬಲ್ಲಿ ನಡೆದಿದೆ.
ಮೃತಪಟ್ಟ ಯುವಕನನ್ನು ದಿವಂಗತ ಇಸ್ಮಾಯಿಲ್ ಎಂಬುವವರ ಪುತ್ರ ಅಶ್ರಫ್ (28) ಎಂದು ಗುರುತಿಸಲಾಗಿದೆ.
ಕೂಲಿ ಕೆಲಸ ಮಾಡಿಕೊಂಡಿದ್ದ ಇವರು ಪಾಂಡವರಕಲ್ಲಿನ ಮನೆಯೊಂದರಲ್ಲಿ ಮಧ್ಯಾಹ್ನದ ಸಮಯ ಅಡಿಕೆ ಸುಲಿಯುತ್ತಿದ್ದಾಗ ಕಾಲಿನ ಬೆರಳಿಗೆ ಹಾವು ಕಚ್ಚಿತ್ತು ಎನ್ನಲಾಗಿದೆ. ತಕ್ಷಣ ಅವರಿಗೆ ಪ್ರಥಮ ಚಿಕಿತ್ಸೆ ನೀಡಿ ಮಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಷ್ಟರಲ್ಲಿ ಅವರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಇವರಿಗೆ 6 ತಿಂಗಳ ಹಿಂದೆಯಷ್ಟೇ ಮದುವೆಯಾಗಿತ್ತು ಎನ್ನಲಾಗಿದೆ.
- Advertisement -








