Saturday, June 6, 2026
spot_imgspot_img
spot_imgspot_img

ಬಂಟ್ವಾಳ: ಅಕ್ರಮ ಮದ್ಯ ಸಾಗಾಟ – ಮದ್ಯದ ಸಹಿತ ಆರೋಪಿಯ ಬಂಧನ!

- Advertisement -
- Advertisement -

ಬಂಟ್ವಾಳ: ಬಂಟ್ವಾಳದಲ್ಲಿ ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ 50 ಲೀಟರ್ ಮದ್ಯವನ್ನು ವಶಕ್ಕೆ ಪಡೆದು ಆರೋಪಿಯನ್ನು ಬಂಧಿಸಿದ್ದಾರೆ.ಬಂಟ್ವಾಳ ತಾಲೂಕಿನ ಮೊಡಂಕಾಪಿನ ಸಂದೀಪ್ ಲೋಬೊ ಬಂಧಿತ ಆರೋಪಿ.

ಆರೋಪಿ ತನ್ನ ಟೊಯೊಟಾ ಇಟಿಯೋಸ್ ಕಾರಿನಲ್ಲಿ 50 ಲೀಟರ್ ಮದ್ಯವನ್ನು ಸಾಗಾಟ ಮಾಡುತ್ತಿದ್ದ ವೇಳೆ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರು ಆರೋಪಿಗೆ ಸಂಬಂಧಿಸಿದ ಕಟ್ಟಡಕ್ಕೆ ದಾಳಿ ನಡೆಸಿ 107 ಲೀಟರ್ ಮದ್ಯ ಮತ್ತು 34 ಲೀಟರ್ ಬೀಯರ್ ಅನ್ನು ವಶಕ್ಕೆ ಪಡೆದರು.

ಆರೋಪಿಯ ಇಟಿಯೋಸ್ ಕಾರು ಮತ್ತು ಅಶೋಕ್ ಲೇಲ್ಯಾಂಡ್ ಟೆಂಪೋ ವಶಕ್ಕೆ ಪಡೆಯಲಾಗಿದೆ. ವಶಕ್ಕೆ ಪಡೆದ ಮದ್ಯದ ಮೌಲ್ಯ ಅಂದಾಜು 22 ಲಕ್ಷ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

Related news

error: Content is protected !!