Wednesday, May 8, 2024
spot_imgspot_img
spot_imgspot_img

ಬಂಟ್ವಾಳ : ಅಕ್ರಮ ಜಾನುವಾರು ಸಾಗಾಟ ಬೇಧಿಸಿದ ಬಂಟ್ವಾಳ ನಗರ ಪೊಲೀಸರು : ಜಾನುವಾರು ಸಹಿತ ಇಬ್ಬರು ವಶ

- Advertisement -G L Acharya panikkar
- Advertisement -

ಬಂಟ್ವಾಳ : ಅಕ್ರಮ ಜಾನುವಾರು ಸಾಗಾಟ ಪ್ರಕರಣ ಬೇಧಿಸಿದ ಬಂಟ್ವಾಳ ನಗರ ಠಾಣಾ ಪೊಲೀಸರು ಜಾನುವಾರು ಸಹಿತ ಇಬ್ಬರು ಆರೋಪಿಗಳನ್ನು ವಶಪಡಿಸಿಕೊಂಡಿರುವ ಘಟನೆ ಬಂಟ್ವಾಳ ಸಮೀಪದ ಟಿಪ್ಪು ನಗರ ಎಂಬಲ್ಲಿ ನಡೆದಿದೆ.

ನಗರ ಠಾಣಾಧಿಕಾರಿ ರಾಮಕೃಷ್ಣ ನೇತೃತ್ವದ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದು, ದನಗಳನ್ನು ಸಾಗಾಟ ಮಾಡುತ್ತಿದ್ದ KA-19-MF-4460 ನೋಂದಣಿ ಸಂಖ್ಯೆಯ ಒಮ್ಮಿ ಕಾರನ್ನು ಪೊಲೀಸರು ತಡೆದಾಗ, ಕಾರು ಚಾಲಕ ಹಾಗೂ ಕಾರಿನಲ್ಲಿದ್ದ ಮತ್ತೋರ್ವ ವ್ಯಕ್ತಿ ಪರಾರಿಯಾಗಲು ಯತ್ನಿಸಿದ್ದು, ಅವರನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಬಂಧಿತ ಆರೋಪಿಗಳನ್ನು ಒಮ್ಮಿ ಕಾರು ಚಾಲಕ, ಪುದು ಗ್ರಾಮದ ಮಾರಿಪಳ್ಳ ನಿವಾಸಿ ಜಾಬಿರ್ (24) ಹಾಗೂ ಲೊರೆಟ್ಟೊಪದವು ಸಮೀಪದ ಟಿಪ್ಪು ನಗರ ನಿವಾಸಿ ಅಬ್ದುಲ್ ನಾಸೀರ್ (32) ಎಂದು ಹೆಸರಿಸಲಾಗಿದೆ.

ವಾಹನದಲ್ಲಿ ಪರಿಶೀಲಿಸಿದಾಗ 5 ಜಾನುವಾರುಗಳು ಕಂಡುಬಂದಿದ್ದು,, ಜಾನುವಾರುಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ ಒಮ್ಮಿ ಕಾರನ್ನು ವಶಕ್ಕೆ ಪಡೆದು, ಬಂಟ್ವಾಳ ನಗರ ಠಾಣೆಯಲ್ಲಿ ಅಪರಾಧ ಕ್ರಮಾಂಕ 149/2023 ಕಲಂ 5, 7, 12 ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧ ಮತ್ತು ಸಂರಕ್ಷಣಾ ಅಧಿನಿಯಮ 2020,e : 11 The Prevention of Cruelty to Animals Act 1960 )
ಕಲಂ 379 ಜೊತೆಗೆ 34 ಐಪಿಸಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

- Advertisement -

Related news

error: Content is protected !!