Monday, April 29, 2024
spot_imgspot_img
spot_imgspot_img

ಬಂಟ್ವಾಳ: ಬಂಟ್ವಾಳ ನಗರ ಪೊಲೀಸರ ಮಿಂಚಿನ ಕಾರ್ಯಾಚರಣೆ :ಮಹಿಳೆಯ ಚಿನ್ನದ ಸರ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದ ಸೊತ್ತು ಸಹಿತ ಇಬ್ಬರು ಖದೀಮರ ಸೆರೆ

- Advertisement -G L Acharya panikkar
- Advertisement -

ಬಂಟ್ವಾಳ: ಬಿ ಸಿ ರೋಡು ಸಮೀಪದ ಅಜ್ಜಿಬೆಟ್ಟು ಮೈದಾನದ ಬಳಿ ಅಂಗಡಿಯಲ್ಲಿ ಸಾಮಾಗ್ರಿ ಖರೀದಿಸುವ ನೆಪದಲ್ಲಿ ಕಳೆದ ಡಿ 14 ರಂದು ಮಹಿಳೆಯ ಕತ್ತಿನಲ್ಲಿದ್ದ ಚಿನ್ನದ ಸರ ಎಗರಿಸಿ ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯಾಚರಣೆ ನಡೆಸಿದ ಬಂಟ್ವಾಳ ನಗರ ಠಾಣಾ ಪೊಲೀಸರು ಕಳವಾದ ಸೊತ್ತು ಸಹಿತ ಇಬ್ಬರು ಖದೀಮರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಗಳನ್ನು ಮಂಗಳೂರು ತಾಲೂಕು, ಬೈಕಂಪಾಡಿ- ಅಂಗರಗುಂಡಿ ಪ್ರಿಯದರ್ಶಿನಿ ಸರ್ಕಲ್ ನಿವಾಸಿ ಜನಾರ್ದನ ಪೂಜಾರಿ ಅವರ ಪುತ್ರ ಅಶೋಕ್ (34) ಹಾಗೂ ಬೋಳಾರು ಶೇಡಿಗುರಿ-ದಂಬೇಲ್, ಎಸ್ ಡಿ ಎಂ ಶಾಲಾ ಬಳಿಯ ಲೀಲಾ ಕಂಪೌಂಡ್ ನಿವಾಸಿ ಸುಂದರ ಪೂಜಾರಿ ಅವರ ಪುತ್ರ ಸಚಿನ್ (34) ಎಂದು ಹೆಸರಿಸಲಾಗಿದೆ.

ಪ್ರಕರಣದ ಬಗ್ಗೆ ತನಿಖೆ ಕೈಗೊಂಡ ಜಿಲ್ಲಾ ಎಸ್ಪಿ ರಿಷ್ಯಂತ್ ಸಿ ಬಿ ಅವರ ನಿರ್ದೇಶನದಂತೆ ಜಿಲ್ಲಾ ಎಡಿಶನಲ್ ಎಸ್ಪಿ ಧರ್ಮಪ್ಪ, ಬಂಟ್ವಾಳ ಡಿವೈಎಸ್ಪಿ ವಿಜಯ ಪ್ರಸಾದ್ ಅವರ ಮಾರ್ಗದರ್ಶನದಲ್ಲಿ ಬಂಟ್ವಾಳ ನಗರ ಠಾಣಾ ಇನ್ಸ್. ಪೆಕ್ಟರ್ ಅನಂತ ಪದ್ಮನಾಭ ಕೆ ವಿ, ಪಿಎಸ್ಸೆಗಳಾದ ರಾಮಕೃಷ್ಣ, ಕಲೈಮಾರ್ ಪಿ ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಎಚ್ ಸಿ ಗಳಾದ ಇರ್ಷಾದ್ ಪಿ, ರಾಜೇಶ್ ಎಸ್. ಗಣೇಶ್ ಎನ್, ಪಿಸಿಗಳಾದ ಮೋಹನ ವೈ ಎ ವಿವೇಕ್ ಕೆ ಅವರ ತಂಡ ಈ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಶುಕ್ರವಾರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಗಳಿಂದ 50 ಸಾವಿರ ರೂಪಾಯಿ ಮೌಲ್ಯದ ಒಂದೂವರೆ ಪವನ್ ತೂಕದ ಚಿನ್ನದ ಸರ ಹಾಗೂ ಕೃತ್ಯಕ್ಕೆ ಬಳಸಿದ 25 ಸಾವಿರ ರೂಪಾಯಿ ಮೌಲ್ಯದ ದ್ವಿಚಕ್ರ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

- Advertisement -

Related news

error: Content is protected !!