Tuesday, June 23, 2026
spot_imgspot_img
spot_imgspot_img

ಬಂಟ್ವಾಳ: ಅಕ್ರಮ ಗಾಂಜಾ ಸಾಗಾಟ ಪತ್ತೆ; ಇಬ್ಬರು ಆರೋಪಿಗಳು ಹಾಗೂ ಸಾವಿರಾರು ಮೌಲ್ಯದ ಸೊತ್ತು ಪೋಲೀಸರ ವಶಕ್ಕೆ..!

- Advertisement -
- Advertisement -

ಬಂಟ್ವಾಳ: ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ ಘಟನೆ ಪಾಣೆಮಂಗಳೂರು ಸಮೀಪದ ನರಹರಿ ಪರ್ವತದ ಬಳಿ ನಡೆದಿದೆ.

ಬಂಧಿತರನ್ನು ಪುತ್ತೂರು ತಾಲೂಕು ಕಬಕ ನಿವಾಸಿ ಮಹಮ್ಮದ್ ರಫೀಕ್, ಕೆಮ್ಮಿಂಜೆ ಮುಕ್ರಂಪಾಡಿ ನಿವಾಸಿ ತಾರಾನಾಥ ಪೂಜಾರಿ(ಪುಟ್ಟ) ಎಂದು ಗುರುತಿಸಲಾಗಿದೆ.

ಬಂಟ್ವಾಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷರು ನೀಡಿದ ಮಾಹಿತಿ ಮೇರೆಗೆ ಪೊಲೀಸ್ ಉಪನೀರಿಕ್ಷಕರಾದ ಕಲೈಮಾರ್ ಮತ್ತು ಸಿಬ್ಬಂದಿಗಳು ಪಾಣೆಮಂಗಳೂರು ಸಮೀಪದ ನರಹರಿ ಪರ್ವತದ ಬಳಿ ತೆರಳಿದಾಗ ರಸ್ತೆ ಬದಿಯಲ್ಲಿ ಇಬ್ಬರು ಅನುಮಾನಸ್ಪದವಾಗಿ ನಿಂತಿದ್ದು, ಪೊಲೀಸ್ ಜೀಪನ್ನು ನಿಲ್ಲಿಸಿದ ತಕ್ಷಣ ಅವರು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದು, ಈ ವೇಳೆ ಅವರನ್ನು ಸುತ್ತುವರಿದು ವಿಚಾರಿಸಿದಾಗ ಮಾದಕ ವಸ್ತುಗಳ ಇರುವುದು ಪತ್ತೆಯಾಗಿದೆ.

ಪ್ಲಾಸ್ಟಿಕ್ ಚೀಲದಲ್ಲಿ ಮತ್ತು ಆರೋಪಿಯೋರ್ವನ ಸೊಂಟದಲ್ಲಿ ಇನ್ನೊರ್ವನ ಪ್ಯಾಂಟ್ ಜೇಬಿನಲ್ಲಿ ಗಾಂಜಾವನ್ನು ಇರಿಸಿಕೊಂಡಿದ್ದು, ಒಟ್ಟಾರೆಯಾಗಿ ಅಂದಾಜು 7,500 ರೂ ಮೌಲ್ಯದ 322 ಗ್ರಾಂ ಗಾಂಜಾವನ್ನು ಮತ್ತು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಬಗ್ಗೆ ಠಾಣೆಯಲ್ಲಿ 62/2022 ಕಲಂ: 8 (C), 20(b)(ii) (A) NDPS ಆಕ್ಟ್ ನಂತೆ ಪ್ರಕರಣ ದಾಖಲಾಗಿದೆ. ಕಾರ್ಯಾಚರಣೆಯಲ್ಲಿ ಪೊಲೀಸ್ ಉಪನೀರಿಕ್ಷಕರಾದ ಕಲೈಮಾರ್ ಸಿಬ್ಬಂದಿಗಳಾದ ಉದಯ ರೈ, ಕುಮಾರ್ ಕೆ ನಾಗರಾಜ್ ಪಾಲ್ಗೊಂಡಿದ್ದರು.

- Advertisement -

Related news

error: Content is protected !!