Wednesday, July 29, 2026
spot_imgspot_img
spot_imgspot_img

ಏರಮಲೆ ದೇವಸ್ಥಾನ ಮುಂಭಾಗದಲ್ಲಿ ತಡೆಗೋಡೆಯ ಗುದ್ದಲಿ ಪೂಜೆ

- Advertisement -
- Advertisement -

ಬಂಟ್ವಾಳ(ನ.5): ಬಂಟ್ವಾಳ ತಾಲೂಕು ನರಿಕೊಂಬು ಗ್ರಾಮದ ಏರೆಮಲೆ ಶ್ರೀ ಕಾಡೆದಿ ಭದ್ರಕಾಳಿ ದೇವಸ್ಥಾನದ ಮುಂಭಾಗದ ತಡೆಗೋಡೆ ರಚನೆಗೆ ತಾಲೂಕು ಪಂಚಾಯತ್ ಸದಸ್ಯರಾದ ಶ್ರೀಮತಿ ಗಾಯತ್ರಿ ರವೀಂದ್ರ ಸಪಲ್ಯ ಇವರ ಅನುದಾನದಿಂದ ಸುಮಾರು ರೂ 1.52 ಲಕ್ಷ ವೆಚ್ಚದ ತಡೆಗೋಡೆ ನಿರ್ಮಾಣದ ಗುದ್ದಲಿ ಪೂಜೆಯನ್ನು ಮಾಜಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ. ರಮಾನಾಥ ರೈ ಯವರು ನೆರೆವೇರಿಸಿದರು.

ಈ ಸಂದರ್ಭದಲ್ಲಿ ಕ್ಷೇತ್ರದ ಮುಕ್ತೇಸರಾದ ಕೇಶವ ಶಾಂತಿ, ಮೋನಪ್ಪ ಪೂಜಾರಿ, ರಾಜಾ ಬಂಟ್ವಾಳ, ಸಂಜೀವ ಸಪಲ್ಯ, ಸಂಜೀವ ಪೂಜಾರಿ, ಚಂದ್ರಶೇಖರ ಕೇದಿಗೆ.ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಅಬ್ಬಾಸ್ ಅಲಿ, ತಾಲೂಕು ಪಂಚಾಯತ್ ಸದಸ್ಯರಾದ ಶ್ರೀಮತಿ ಗಾಯತ್ರಿ ರವೀಂದ್ರ ಸಪಲ್ಯ, ಪಾಣೆಮಂಗಳೂರು ಬ್ಲಾಕ್ ಅಧ್ಯಕ್ಷರಾದ ಸುದೀಪ್ ಕುಮಾರ್ ಶೆಟ್ಟಿ.ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷರಾದ ಅಲ್ಬರ್ಟ್ ಮೆನೇಜಸ್, ನರಿಕೊಂಬು ವಲಯ ಕಾಂಗ್ರೆಸ್ ಅಧ್ಯಕ್ಷರಾದ ಮಾಧವ ಪೂಜಾರಿ ಕರ್ಬೆಟ್ಟು ಉಪಸ್ಥಿತರಿದ್ದರು .

ವಲಯ ಕಾರ್ಯದರ್ಶಿಯಾದ ದಿವಾಕರ ಪೂಜಾರಿ ಎಲಬೆ,ಬ್ಲಾಕ್ ಕಾರ್ಯದರ್ಶಿಯಾದ ಅರುಣ್ ಶೆಟ್ಟಿ ಅಂತರ,ನರಿಕೊಂಬು ಯುವ ಕಾಂಗ್ರೆಸ್ ಅಧ್ಯಕ್ಷರಾದ ಪ್ರಸಾದ್ ಕರ್ಬೆಟ್ಟು, ಮಾಜಿ ಪಂಚಾಯತ್ ಅಧ್ಯಕ್ಷರಾದ ಆನಂದ ಸಾಲಿಯಾನ್, ನಿಕಟಪೂರ್ವ ಸದಸ್ಯರಾದ ವಿಶ್ವನಾಥ್ ಪೂಜಾರಿ, ರವೀಂದ್ರ ಸಪಲ್ಯ, ಪ್ರಮುಖರಾದ ಲಕ್ಷ್ಮಣ್ ಪೂಜಾರಿ, ಹರೀಶ್, ಕೆ. ಸತೀಶ್ ಕೋಟ್ಯಾನ್, ಬಾಲಕೃಷ್ಣ ಕಲ್ಲಾಕು, ಗುತ್ತಿಗೆದಾರರಾದ ಗಣೇಶ್ ಬಿ. ಸಿ ರೋಡ್ ಉಪಸ್ಥಿತರಿದ್ದರು.

- Advertisement -

Related news

error: Content is protected !!