Wednesday, May 22, 2024
spot_imgspot_img
spot_imgspot_img

ಬಂಟ್ವಾಳ: ಸುಳ್ಳು ವಾಟ್ಸಪ್ ಸಂದೇಶಕ್ಕೆ ಮಾರು ಹೋಗಿ ಲಕ್ಷಾಂತರ ರೂ. ಕಳೆದುಕೊಂಡ ಅಟೋ ಚಾಲಕ..!

- Advertisement -G L Acharya panikkar
- Advertisement -

ಬಂಟ್ವಾಳ: ಅಪರಿಚಿತ ವಾಟ್ಸಪ್ ಸಂದೇಶ ನಂಬಿ ಆಫ್ ಡೌನ್ ಲೋಡ್ ಮಾಡಿಕೊಂಡು ಹಣ ಹೂಡಿಕೆ ಮಾಡಿದ ಅಟೋ ರಿಕ್ಷಾ ಚಾಲಕ ಲಕ್ಷಾಂತರ ರೂಪಾಯಿ ಕಳೆದುಕೊಂಡ ಘಟನೆ ಬಂಟ್ವಾಳ ಸರಪಾಡಿ ಗ್ರಾಮದಲ್ಲಿ ನಡೆದಿದೆ.

ವಂಚನೆಗೊಳಗಾದ ವ್ಯಕ್ತಿ ಸರಪಾಡಿ ಗ್ರಾಮದ ನಿವಾಸಿ ಹರೀಶ್ ಕುಮಾರ್ (33) ಎಂದು ಗುರುತಿಸಲಾಗಿದೆ.

ಸರಪಾಡಿ ಗ್ರಾಮದ ನಿವಾಸಿ ಹರೀಶ್ ಕುಮಾರ್ (33) ಎಂಬವರು ಅಟೋ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು, ಅವರ ಮೊಬೈಲಿಗೆ 2023 ರ ಡಿಸೆಂಬರ್ 20 ರಂದು ಅಪರಿಚಿತ ವಾಟ್ಸಪ್ ನಿಂದ ಬಂದ ಸೂಚನೆಯಂತೆ, NumGenius A1 APPನ್ನು ಡೌನ್‌ಲೋಡು ಮಾಡಿಕೊಂಡಿರುತ್ತಾರೆ. ಆ ಆಪ್ ಮೂಲಕ ಹಣವನ್ನು ಹೂಡಿಕೆ ಮಾಡಿ ಲಾಭಗಳಿಸುವ ಉದ್ದೇಶದಿಂದ ಅಪರಿಚಿತ ವಾಟ್ಸಪಿನಲ್ಲಿ ಸೂಚಿಸಿದ ವಿವಿಧ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು 5,85,200/- ರೂಪಾಯಿ ಹಣವನ್ನು ವರ್ಗಾಯಿಸಿರುತ್ತಾರೆ.

ಈ ಪೈಕಿ 1,20,175/- ಹಣವನ್ನು ಹಿಂತಿರುಗಿಸಿದ್ದು, ಬಾಕಿ 4,65,025/- ರೂಪಾಯಿ ಹಣವನ್ನು ವಾಪಾಸು ನೀಡದೆ ಮೋಸ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 37/2024, ಕಲಂ 417, 419, 420 ಐಪಿಸಿ ಹಾಗೂ 66(ಸಿ) 66(ಡಿ) ಮಾಹಿತಿ ತಂತ್ರಜ್ಞಾನ ಕಾಯ್ದೆಯಂತೆ ಪ್ರಕರಣ ದಾಖಲಿಸಿವ ಪೊಲೀಸರು ತನಿಖೆ ನಡೆಸುತಿದ್ದಾರೆ.

- Advertisement -

Related news

error: Content is protected !!