Wednesday, September 9, 2026
spot_imgspot_img
spot_imgspot_img

ಬಂಟ್ವಾಳ: ತಮಿಳುನಾಡು ಮೂಲದ ವ್ಯಕ್ತಿ ನಾಪತ್ತೆ; ದೂರು ದಾಖಲು

- Advertisement -
- Advertisement -

ಬಂಟ್ವಾಳ: ಬಿಮೂಡ ಗ್ರಾಮದ ಕೊಡಂಗೆ ಎಂಬಲ್ಲಿ ವಾಸ್ತವ್ಯವಿದ್ದ ತಮಿಳುನಾಡು ಮೂಲದ ಬಟ್ಟೆ ವ್ಯಾಪಾರಿಯೊಬ್ಬರು ನಾಪತ್ತೆಯಾಗಿರುವ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ತಮಿಳುನಾಡಿನ ತಿರುಪ್ಪರ ಜಿಲ್ಲೆ ನಿವಾಸಿ ಸೆಲ್ವಕುಮಾರ್ ನಾಪತ್ತೆಯಾಗಿರುವ ವ್ಯಕ್ತಿ. ಬಿ ಮೂಡ ಗ್ರಾಮದ ಕೊಡಂಗೆ ಎಂಬಲ್ಲಿನ ಜಯರಾವ್ ಶೆಟ್ಟಿ ಎಂಬವರ ಬಾಡಿಗೆ ಮನೆಯಲ್ಲಿ ವಾಸ್ತವ್ಯವಿದ್ದ ಇವರು, ಬಟ್ಟೆ ಲೈನ್ ಸೇಲ್ ವ್ಯಾಪಾರ ಮಾಡಿಕೊಂಡಿದ್ದರು. ನ.18ರಿಂದ ಇವರು ನಾಪತ್ತೆಯಾಗಿರುವುದಾಗಿ ಸಂಬಂಧಿ ರಾಮಸ್ವಾಮಿ‌ ಎಂಬವರು ಪೊಲೀಸರಿಗೆ ದೂರು ನೀಡಿದ್ದು, ಪತ್ತೆಗಾಗಿ ಮನವಿ ಮಾಡಿದ್ದಾರೆ.

ಬಂಟ್ವಾಳ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದುಈ ವ್ಯಕ್ತಿಯನ್ನು ಯಾರಾದರೂ ಕಂಡಲ್ಲಿ ಬಂಟ್ವಾಳ ನಗರ ಪೊಲೀಸರಿಗೆ ಮಾಹಿತಿ ನೀಡುವಂತೆ ವಿನಂತಿಸಿದ್ದಾರೆ.

- Advertisement -

Related news

error: Content is protected !!