Wednesday, June 17, 2026
spot_imgspot_img
spot_imgspot_img

ಬಂಟ್ವಾಳ: ನಾಪತ್ತೆಯಾಗಿದ್ದ ರಿಕ್ಷಾ ಚಾಲಕ ಶವವಾಗಿ ಪತ್ತೆ..!

- Advertisement -
- Advertisement -

ಪುಂಜಾಲಕಟ್ಟೆ: ನಾಪತ್ತೆಯಾಗಿದ್ದ ದರ್ಶನ ಪಾತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದ ವ್ಯಕ್ತಿಯ ಮೃತದೇಹ ಫಲ್ಗುಣಿ ನದಿಯಲ್ಲಿ ಪತ್ತೆಯಾಗಿದೆ.

ಗುರುವಾರ ಬೆಳಗಿನ ಜಾವ ಮನೆಯಿಂದ ಬಾಡಿಗೆ ನೆಪದಲ್ಲಿ ತೆರಳಿದ್ದ ಶ್ರೀ ನಾಗಬ್ರಹ್ಮ ದೈವಸ್ಥಾನ ಬೈದರ್ಕಳ ಗರಡಿಯಲ್ಲಿ ಕೋಟಿಯ ದರ್ಶನ ಪಾತ್ರಿಯಾಗಿರುವ ಗಿರೀಶ್‌ (37) ನಿಗೂಢವಾಗಿ ನಾಪತ್ತೆಯಾಗಿದ್ದರು.

ಮೃತದೇಹ ಫಲ್ಗುಣಿ ನದಿಯಲ್ಲಿ ಅಡ್ಡೂರು ಪರಿಸರದ ಕೆಳಗಿನಕೆರೆಯಲ್ಲಿ ಗಿರೀಶ್‌ ಅವರ ಮೃತದೇಹ ಪತ್ತೆಯಾಗಿದೆ.

ಗಿರೀಶ್‌ ಅಡ್ಡೂರು-ಪೊಳಲಿ ಸೇತುವೆಯ ಮೇಲೆ ಅಟೋರಿಕ್ಷಾ ನಿಲ್ಲಿಸಿ ಬಳಿಕ ಫಲ್ಗುಣಿ ನದಿಗೆ ಹಾರಿ ಆತ್ಮಹತ್ಯೆ ಮಾಡಿರುವ ಬಗ್ಗೆ ಪೊಲೀಸರು ತಮ್ಮ ಪ್ರಾಥಮಿಕ ತನಿಖೆಯಲ್ಲಿ ಕಂಡುಕೊಂಡಿದ್ದಾರೆ. ಗಿರೀಶ್‌ ಅವರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಅವರ ಆತ್ಮಹತ್ಯೆಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ.

- Advertisement -

Related news

error: Content is protected !!