Sunday, June 7, 2026
spot_imgspot_img
spot_imgspot_img

ಬಂಟ್ವಾಳ: ಬೈಕ್‌ಗೆ ಪಿಕಪ್ ಡಿಕ್ಕಿ; ಸವಾರನಿಗೆ ಗಾಯ..!

- Advertisement -
- Advertisement -

ಬಂಟ್ವಾಳ: ಪೆಟ್ರೋಲ್ ಹಾಕುವ ಉದ್ದೇಶದಿಂದ ನಿಲ್ಲಿಸಿದ ಬೈಕ್ ಗೆ ಪಿಕಪ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಸವಾರ ಗಾಯಗೊಂಡ ಘಟನೆ ಫರಂಗಿಪೇಟೆಯಲ್ಲಿ ನಡೆದಿದೆ.

ಗಾಯಗೊಂಡ ವ್ಯಕ್ತಿಯನ್ನು ಅಮ್ಟಾಡಿ ಗ್ರಾಮದ ನಲ್ಕೆಮಾರ್ ನಿವಾಸಿ ವೀರಣ್ಣ ಗೌಡ ಗಾಯಗೊಂಡ ವ್ಯಕ್ತಿ.

ಕರ್ತವ್ಯದ ನಿಮಿತ್ತ ಫರಂಗಿಪೇಟೆಗೆ ತೆರಳುವ ವೇಳೆ ಪೆಟ್ರೋಲ್ ಹಾಕುವ ಉದ್ದೇಶದಿಂದ ಪಂಪ್‌ಗೆ ತೆರಳುವ ಮುನ್ನ ರಸ್ತೆ ಬದಿಯಲ್ಲಿ ನಿಲ್ಲಿಸಿದ ಬೈಕ್ ಗೆ ಬಿ.ಸಿ.ರೋಡಿನ ಕಡೆಯಿಂದ ಫರಂಗಿಪೇಟೆಯ ಕಡೆಗೆ ತೆರಳುತ್ತಿದ್ದ ಪಿಕಪ್ ವಾಹನ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ರಭಸಕ್ಕೆ ನಿಲ್ಲಿಸಿದ ಬೈಕ್ ನಲ್ಲಿ ಕುಳಿತುಕೊಂಡಿದ್ದ ಚಾಲಕ ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ. ಗಾಯಗೊಂಡ ಸವಾರನನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಮೆಲ್ಕಾರ್ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!