ಬಂಟ್ವಾಳ: ವಿದ್ಯಾರ್ಥಿಗಳು ತಮ್ಮ ಕಲಿಕಾ ಹಂತದಲ್ಲಿ ಹೆತ್ತವರು , ಶಿಕ್ಷಕರು, ಮತ್ತು ಕಲಿಯಬೇಕಾದ ವಿಷಯಗಳ ಮಹತ್ವವನ್ನು ಮನವರಿಕೆ ಮಾಡಿಕೊಂಡು ಬಳಿಕ ಬದ್ಧತೆಯಿಂದ ಅಧ್ಯಯನ ಮಾಡಿದರೆ ಜೀವನದಲ್ಲಿ ಯಶಸ್ಸು ನಿಶ್ಚಿತ ಎಂದು ಉಪನ್ಯಾಸಕ ಮತ್ತು ತರಬೇತುದಾರ ಅಬ್ದುಲ್ ರಝಾಕ್ ಅನಂತಾಡಿ ಅಭಿಪ್ರಾಯಪಟ್ಟರು.

ಅವರು ಪಾಣೆಮಂಗಳೂರಿನ ಸಲ್ ಸಬೀಲ್ ವಿದ್ಯಾರ್ಥಿ ಸಂಘಟನೆಯ ವಾರ್ಷಿಕೋತ್ಸವದ ಅಂಗವಾಗಿ ನಡೆದ ವಿಂಟರ್ ಶಿಬಿರ – 2021 ಅಂಗವಾಗಿ ನಡೆದ ಒಂದು ದಿನದ ತರಬೇತಿ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಪಾಣೆಮಂಗಳೂರು ಆಸುಪಾಸಿನ ವಿದ್ಯಾರ್ಥಿಗಳು ಒಟ್ಟುಸೇರಿ ನಡೆಸುತ್ತಿರುವ ಸಲ್-ಸಬೀಲ್ ಸಂಸ್ಥೆ ಏಳು ವರ್ಷ ಪೂರ್ತಿ ಗೊಳಿಸಿರುವುದು ಶ್ಲಾಘನೀಯವಾಗಿದೆ. ತಾಳ್ಮೆ ಮತ್ತು ನಾಯಕತ್ವ ಗುಣದೊಂದಿಗೆ ಸಂಸ್ಥೆಯ ಬೆಳವಣಿಗೆಗೆ ಇಕ್ಲಾಸ್ ಕೂಡ ಅತಿ ಪ್ರಾಮುಖ್ಯವಾಗಿದೆ ಎಂದು ಆಲಡ್ಕ ಮುಹ್ಯಿದ್ದೀನ್ ಜುಮಾ ಮಸೀದಿ ಮುದರ್ರಿಸರಾದ ಅಬೂಸ್ವಾಲಿಹ್ ಮುಸ್ಲಿಯಾರ್ ಕ್ಯಾಂಪ್‌ನಲ್ಲಿ ಭಾಗವಹಿಸಿ ಸಲಹೆ ನೀಡಿದರು.


ಜನವರಿ 26 ಗಣರಾಜ್ಯೋತ್ಸವದ ದಿನದಂದು ಪಾಣೆಮಂಗಳೂರು ಆಸುಪಾಸಿನ ವಿದ್ಯಾರ್ಥಿಗಳಿಗೆ ವಿಂಟರ್ ಕ್ಯಾಂಪ್ 2021 ಬೋಗೋಡಿ ಶಾಲೆಯಲ್ಲಿ ನಡೆಯಿತು. ಸ್ಪರ್ಧಾ ಕಾರ್ಯಕ್ರಮಗಳನ್ನು ಅಬೂತಾಯಿರ್ ಆಲಡ್ಕ ನೆರವೇರಿಸಿದರು.


ಸಂಸ್ಥೆಯ ಸದಸ್ಯರುಗಳಾದ ಜಾಫರ್ ಬೋಗೊಡಿ, ಜಮಾಲ್ ಬಂಗ್ಲೆಗುಡ್ಡೆ, ಬಾತಿಷ್ ಬೋಗೋಡಿ, ಕೈಫ್ ಬೋಗೋಡಿ, ರಿಫಾತ್ ಬೋಗೋಡಿ, ಅಸ್ಫಾಕ್ ಗುಡ್ಡೆಅಂಗಡಿ, ರಿಲ್ವಾನ್ ಮೆಲ್ಕಾರ್, ರಾಶಿದ್ ಬೋಗೋಡಿ ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷ ನಜೀಬ್ ಬೋಗೋಡಿ ಸ್ವಾಗತಿಸಿ, ಉಪಾಧ್ಯಕ್ಷ ಉಬೈದ್ ಬೋಗೋಡಿ ವಂದಿಸಿದರು. ಜೊತೆ ಕಾರ್ಯದರ್ಶಿ ಸಾಬಿತ್ ಕಾರ್ಯಕ್ರಮ ನಿರೂಪಿಸಿದರು.











