Friday, April 26, 2024
spot_imgspot_img
spot_imgspot_img

ನೂತನ ಅಧ್ಯಕ್ಷ ಉಪಾಧ್ಯಕ್ಷರು ಸವಾಲುಗಳನ್ನು ಎದುರಿಸಿ ಬಂಟ್ವಾಳ ಪುರಸಭೆಯನ್ನು ಕ್ರಿಯಾಶೀಲವಾಗಿ ಮುನ್ನಡೆಸಬೇಕು -ಬಿ.ರಮಾನಾಥ ರೈ

- Advertisement -G L Acharya panikkar
- Advertisement -

ಬಂಟ್ವಾಳ: ಮೀಸಲಾತಿಯನ್ನು ಮಾರ್ಪಾಡು ಮಾಡುವ ಮೂಲಕ ಅಧಿಕಾರ ಶಾಹಿಗಳು ಅಧಿಕಾರ ಮಾಡಿದ್ದರಿಂದ ಪುರಸಭೆಯ ಅಭಿವೃದ್ಧಿ ಕಾರ್ಯಗಳು ನೆನೆಗುದಿಗೆ ಬಿದ್ದಿದ್ದು,ನೂತನ ಅಧ್ಯಕ್ಷ ಉಪಾಧ್ಯಕ್ಷರು ಸವಾಲುಗಳನ್ನು ಎದುರಿಸಿ ಬಂಟ್ವಾಳ ಪುರಸಭೆಯನ್ನು ಕ್ರಿಯಾಶೀಲವಾಗಿ ಮುನ್ನಡೆಸಬೇಕು ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಸಲಹೆ ನೀಡಿದ್ದಾರೆ.


ಬಂಟ್ವಾಳ ಪುರಸಭೆಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಮಹಮ್ಮದ್ ಶರೀಫ್ ಹಾಗೂ ಉಪಾಧ್ಯಕ್ಷರಾದ ಜೆಸಿಂತಾ ಡಿಸೋಜಾ ರವರ ಪದಗ್ರಹಣ ಸಮಾರಂಭದಲ್ಲಿ ಅವರು ಭಾಗವಹಿಸಿ ಮಾತನಾಡಿದರು.
ತಾನು ಶಾಸಕನಾಗಿ, ಸಚಿವನಾಗಿದ್ದ ಅವಧಿಯಲ್ಲಿ ಪುರಸಭಾ ವ್ಯಾಪ್ತಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ನಡೆಸಿದ್ದೇನೆ. ಆದರೆ ಕಳೆದ ಎರಡೂವರೆ ವರ್ಷಗಳಲ್ಲಿ ಅಭಿವೃದ್ಧಿ ಗೆ ಹಿನ್ನಡೆಯಾಗಿದೆ.


ಪುರಸಭೆ ನಗರ ಸಭೆಯಾಗಲು ರಾಜಕೀಯ ಪ್ರೇರಿತ ಶಕ್ತಿಯಿಂದ ಸಾಧ್ಯವಾಗಿಲ್ಲ. ತನ್ನ ಅವಧಿಯಲ್ಲಿ
ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗಿತ್ತು. ಅಧಿಕಾರಿಗಳ ಸಹಕಾರದಿಂದ ಬೈಪಾಸ್ ರಸ್ತೆ ನಿರ್ಮಾಣ, ಸಾರಿಗೆ ಸುಂದರೀಕರಣಕ್ಕೆ ಟ್ರಾಫಿಕ್ ಠಾಣೆ ಸ್ಥಾಪನೆ, ಸಮಗ್ರ ಒಳಚರಂಡಿ ಯೋಜನೆಗೆ ಮಂಜೂರಾತಿ, ಕುಡಿಯುವ ನೀರಿನ ಯೋಜನೆ , ತ್ಯಾಜ್ಯ ಸ್ಥಳದಲ್ಲಿ ಉದ್ಯಾನವನ ನಿರ್ಮಾಣ ಹಾಗೂ ಮೆಲ್ಕಾರ್ ಅಗಲೀಕರಣ ಮೊದಲಾದ ಕೆಲಸಗಳು ನಡೆಸಲಾಗಿತ್ತು ಎಂದವರು ಸ್ಮರಿಸಿಕೊಂಡರು.


ನೂತನವಾಗಿ ಅಧ್ಯಕ್ಷ ರಾಗಿ ಅಧಿಕಾರವಹಿಸಿಕೊಂಡ ಮಹಮ್ಮದ್ ಶರೀಫ್ ಮಾತನಾಡಿ, ಮುಂದಿನ ಅವಧಿಯಲ್ಲಿ ಪುರಸಭೆಯನ್ನು ಮಾಜಿ ಸಚಿವ ಬಿ.ರಮಾನಾಥ ರೈ ಅವರ ಮಾರ್ಗದರ್ಶನ ದಲ್ಲಿ , ಸರ್ವ ಸದಸ್ಯರ ಸಹಕಾರ ಹಾಗೂ ನನ್ನ ವೈಯಕ್ತಿಕ ಅನುಭವ ದ ಮೂಲಕ ಮಾದರಿ ಪುರಸಭೆಯನ್ನಾಗಿ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರಲ್ಲದೆ,ಪುರಸಭೆಯ ಎಲ್ಲಾ ಸದಸ್ಯರು ಬೆಂಬಲ ನೀಡುವಂತೆ ಮನವಿ ಮಾಡಿದರು.


ಉಪಾಧ್ಯಕ್ಷೆ ಜೆಸಿಂತಾ ಮಾತನಾಡಿ, ರಮಾನಾಥ ರೈ ಅವರ ಮಾರ್ಗದರ್ಶನ , ಸ್ಪೂರ್ತಿಯಿಂದಾಗಿ ನಾನು ಜನಪ್ರತಿನಿಧಿಯಾಗಲು ಸಾಧ್ಯವಾಯಿತು ಎಂದು ಅವರು ಹೇಳಿದರು. ಜಿಲ್ಲಾ ಯುವ ಕಾಂಗ್ರೇಸ್ ಅಧ್ಯಕ್ಷರಾದ ಮಿಥುನ್ ರೈ ಶುಭ ಕೋರಿದರು.

ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ ಮಾತನಾಡಿ , ಜನರಿಗೆ ಸುಲಭ ರೀತಿಯಲ್ಲಿ ಪುರಸಭೆಯ ಕೆಲಸಗಳು ಆಗಲಿ, ಉತ್ತಮ ಆಡಳಿತ ವ್ಯವಸ್ಥೆ ಆಗಲಿ ಎಂದು ಅವರು ಹೇಳಿದರು. ಅಧಿಕಾರಿ ವರ್ಗದವರು ಸದಸ್ಯರು ಜೊತೆಯಾಗಿ ಕೆಲಸ ಮಾಡಿ ಅಭಿವೃದ್ಧಿ ಯಲ್ಲಿ ಕೈ ಜೋಡಿಸಿ, ಇಲ್ಲದಿದ್ದರೆ ಅಧಿಕಾರಿಗಳಿಗೆ ಮುಂದಿನ ದಿನಗಳಲ್ಲಿ ಸಮಸ್ಯೆಯಾಗಬಹುದು ಎಂಬ ಸಂದೇಶ ವನ್ನು ನೀಡಿದರು.


ಜಿ.ಪಂ.ಸದಸ್ಯೆ ಮಂಜುಳಾ ಮಾದವ ಮಾತನಾಡಿ,ಜನಪ್ರತಿನಿಧಿಗಳ ಜೊತೆಗೆ ಅಧಿಕಾರಿಗಳ ಸಹಕಾರ ಅಭಿವೃದ್ಧಿ ಗೆ ಪೂರಕ ಎಂದು ಹೇಳಿದರು.


ಜಿಲ್ಲಾ ಪಂಚಾಯತ್ ಸದಸ್ಯ ಪದ್ಮಶೇಖರ್ ಜೈನ್ , ತಾಲೂಕು ಪಂಚಾಯತ್ ಉಪಾಧ್ಯಕ್ಷ ಅಬ್ಬಾಸ್ ಅಲಿ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ಬೇಬಿ ಕುಂದರ್, ಸುದೀಪ್ ಕುಮಾರ್, ತಾ.ಪಂ.ಸದಸ್ಯ ಸಂಜೀವ ಪೂಜಾರಿ, ಪುರಸಭಾ ಸದಸ್ಯರಾದ ರಾಮಕೃಷ್ಣ ಆಳ್ವ, ವಾಸು ಪೂಜಾರಿ, ಸಿದ್ದೀಕ್ ಗುಡ್ಡೆಯಂಗಡಿ, ಲೋಲಾಕ್ಷ, ಹಸೈನಾರ್, ಗಂಗಾಧರ್, ಗಾಯತ್ರಿ ಪ್ರಕಾಶ್, ಮೊನೀಶ್ ಅಲಿ, ಇದ್ರೀಸ್, ಝೀನತ್, ಸಂಶಾದ್ , ಜನಾರ್ಧನ ಚೆಂಡ್ತಿಮಾರ್ , ಪ್ರಮುಖರಾದ ಪಿ.ಎ.ರಹೀಂ, ಸದಾಶಿವ ಬಂಗೇರ, ಜಗದೀಶ್ ಕೊಯಿಲ, ಪದ್ಮನಾಭ ರೈ, ಜಯಂತಿ, ಚಿತ್ತರಂಜನ್ ಶೆಟ್ಟಿ, ಬಿ.ಮೋಹನ್ , ವಸಂತಿ ಗಂಗಾಧರ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

ಪುರಸಭಾ ಮುಖ್ಯಾಧಿಕಾರಿ ಲೋನಾ ಬ್ರಿಟ್ಟೋ, ಕಾಂಗ್ರೇಸ್ ಸದಸ್ಯ ಮಹಮ್ಮದ್ ನಂದರಬೆಟ್ಟು ಹಾಗೂ ಬಿಜೆಪಿ ಸದಸ್ಯರು ಅಧಿಕಾರ ಸ್ವೀಕಾರ ಕಾರ್ಯಕ್ರಮದಲ್ಲಿ ಗೈರು ಹಾಜರಾಗಿದ್ದರು.

- Advertisement -

Related news

error: Content is protected !!