Sunday, June 14, 2026
spot_imgspot_img
spot_imgspot_img

ಬಂಟ್ವಾಳ: ಮನೆಯ ಬೀಗ ತೆಗೆದು ನಗ-ನಗದು ಕಳವು..!

- Advertisement -
- Advertisement -

ಬಂಟ್ವಾಳ: ಮನೆಗೆ ಬೀಗಹಾಕಿ ಕೆಲಸಕ್ಕೆ ತೆರಳಿದ್ದ ವೇಳೆ ಮನೆಯ ಬೀಗ ತೆಗೆದು ಮನೆಯೊಳಗೆ ನುಗ್ಗಿ ಲಕ್ಷಾಂತರ ರೂ ಮೌಲ್ಯದ ನಗ ಮತ್ತು ನಗದು ಕಳ್ಳತನ ಮಾಡಿದ ಘಟನೆ ಬಿ.ಮೂಡ ಗ್ರಾಮದ ಬಿಸಿ ರೋಡಿನಲ್ಲಿ ನಡೆದಿದೆ. ವೀಕ್ಷಿತ್‌ ನೀಡಿದ ದೂರಿನಂತೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವೀಕ್ಷಿತ್ ಬಿಸಿರೋಡಿನ ಗ್ಯಾಲಕ್ಸಿ ಅಪಾರ್ಟ್ಮೆಂಟ್ ನಲ್ಲಿ ವಾಸವಾಗಿದ್ದು, ಬೆಳಿಗ್ಗೆ ಮನೆಗೆ ಬೀಗ ಹಾಕಿ ಬೀಗದ ಕೀಯನ್ನು ಬಾಗಿಲ‌ ಸಮೀಪ ಇಟ್ಟು ಕೆಲಸಕ್ಕೆ ಹೋಗಿದ್ದರು. ಸಂಜೆ ಮನೆಗೆ ಬಂದು ನೋಡಿದಾಗ ಮನೆಯ ಬಾಗಿಲು ತೆರೆದಿದ್ದು, ಸೋಪಾದ ಮೇಲೆ ಕೀ ಬಿದ್ದುಕೊಂಡಿತ್ತು. ಮನೆಯ ಒಳಗೆ ಹೋಗಿ ನೋಡಿದಾಗ ಗಾಡ್ರೆಜ್ ಬಾಗಿಲು ತೆರದಿತ್ತು. ಅದರಲ್ಲಿ ಇರಿಸಲಾಗಿದ್ದ 67 ಗ್ರಾಂ ತೂಕದ 3 ಲಕ್ಷ 40 ಸಾವಿರ ರೂ ಮೌಲ್ಯದ ಚಿನ್ನ ಹಾಗೂ 5 ಸಾವಿರ ರೂ ನಗದನ್ನು ಕಳವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!