Tuesday, June 9, 2026
spot_imgspot_img
spot_imgspot_img

ಕಬ್ಬಿಣದ ರಾಡ್‌ನಿಂದ ಹೊಡೆದು ತಾಯಿಯ ಬರ್ಬರ ಹತ್ಯೆ..!

- Advertisement -
- Advertisement -

ಬಾಲಕನೋರ್ವ ತಾಯಿಯನ್ನೇ ಕಬ್ಬಿಣದ ರಾಡ್ ನಿಂದ ತಲೆಗೆ ಹೊಡೆದು ಹತ್ಯೆ ಮಾಡಿದ ಘಟನೆ ಬೆಂಗಳೂರಿನ ಕೆ.ಆರ್.ಪುರಂ ನ ಭೀಮಯ್ಯ ಲೇಔಟ್ ನಲ್ಲಿ ನಡೆದಿದೆ.

ಮೃತಪಟ್ಟ ತಾಯಿ ನೇತ್ರಾವತಿ (40) ಎಂದು ಗುರುತಿಸಲಾಗಿದೆ.

ಅಪ್ರಾಪ್ತ ಮುಳಬಾಗಿಲಿನಲ್ಲಿ ಡಿಪ್ಲೋಮಾ ವ್ಯಾಸಾಂಗ ಮಾಡುತ್ತಿದ್ದನು. ಬೆಳಗ್ಗೆ ಕಾಲೇಜಿಗೆ ಹೋಗಲು ರೆಡಿಯಾಗಿದ್ದ ಪವನ್. ತಾಯಿಗೆ ಊಟ ಬಡಿಸುವಂತೆ ಹೇಳಿದ್ದಾನೆ. ಆದರೆ ತಾಯಿ ಆಗ ಬೇರೆ ಕೆಲಸದಲ್ಲಿ ನಿರತಳಾಗಿದ್ದು ಕೋಪದಲ್ಲಿ ಬೈದಿದ್ದ ತಾಯಿ ನೇತ್ರಾ. ನೀನು ನನ್ನ ಮಗನೇ ಅಲ್ಲ, ನಿನಗೆ ಊಟ ಹಾಕಲ್ಲ ಎಂದು ಬೈದಿದ್ದಳಂತೆ ತಾಯಿ. ಅಷ್ಟಕ್ಕೇ ಕೋಪಗೊಂಡ ಮಗ. ರಾಡ್‌ನಿಂದ ತಾಯಿಯ ತಲೆಗೆ ಬಲವಾಗಿ ಹೊಡೆದಿದ್ದಾನೆ. ಈ ದಾಳಿ ನಿರೀಕ್ಷಸದ ತಾಯಿ ನೇತ್ರಾ. ರಾಡ್‌ನಿಂದ ಬಲವಾಗಿ ಹೊಡೆದಿದ್ದಕ್ಕೆ ತೀವ್ರ ರಕ್ತಸ್ರಾವವಾಗಿ ಮೃತಪಟ್ಟಿದ್ದಾರೆ. ಕೊಲೆ ಮಾಡಿದ ಬಳಿಕ ಠಾಣೆಗೆ ಕರೆ ಮಾಡಿದ್ದ ಮಗ. ಕೂಡಲೇ ಸ್ಥಳಕ್ಕೆ ಬಂದು ಆರೋಪಿಯನ್ನು ವಶಕ್ಕೆ ಪಡೆದಿರೋ ಪೊಲೀಸರು.

- Advertisement -

Related news

error: Content is protected !!