Monday, June 22, 2026
spot_imgspot_img
spot_imgspot_img

ಶೋಕತಪ್ತ ಮೆರವಣಿಗೆಯಲ್ಲಿ ಸಾಗಿದ ಆರ್.ಎಸ್.ಎಸ್.ಪ್ರಮುಖ ವೆಂಕಟರಮಣ ಹೊಳ್ಳರ ಪಾರ್ಥಿವ ಶರೀರ

- Advertisement -
- Advertisement -

ಬಂಟ್ವಾಳ: ಹಿಟ್ ಎಂಡ್ ರನ್ ನಲ್ಲಿ ಮೃತರಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖ, ಮಂಗಳೂರು ವಿಭಾಗ ಗ್ರಾಮ ವಿಕಾಸ ಪ್ರಮುಖ ರಾದ ಬಂಟ್ವಾಳ ನಿವಾಸಿ ವೆಂಕಟ್ರಮಣ ಹೊಳ್ಳ ಅವರ ಪಾರ್ಥಿವ ಶರೀರ ಪುತ್ತೂರು ಆಸ್ಪತ್ರೆ ಯಿಂದ ಬಿ.ಸಿ.ರೋಡಿಗೆ ಆಗಮಿಸಿದ ವೇಳೆ ಬಿ.ಸಿ.ರೋಡಿನ ಮುಖ್ಯ ವೃತ್ತ ದಿಂದ ಅವರ ನಿವಾಸ ಅಗ್ರಬೈಲು ವರಗೆ ಪಾರ್ಥಿವ ಶರೀರವನ್ನು ಮೆರವಣಿಗೆ ಮೂಲಕ ಕೊಂಡೊಯ್ದು ಮೃತರಿಗೆ ಗೌರವ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರಾದ ಕಲ್ಲಡ್ಕ ಡಾ| ಪ್ರಭಾಕರ ಭಟ್, ಸಂಸದ ನಳಿನ್ ಕುಮಾರ್ ಕಟೀಲು, ಶಾಸಕರಾದ ರಾಜೇಶ್ ನಾಯ್ಕ್, ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿ, ಪ್ರಮುಖರಾದ ತುಂಗಪ್ಪ ಬಂಗೇರ, ರವೀಂದ್ರಕಂಬಳಿ, ಪ್ರಭಾಕರ ಪ್ರಭು, ದೇವದಾಸ ಶೆಟ್ಟಿ, ಮಚ್ಚೇಂದ್ರ ಸಾಲಿಯಾನ್, ಉದಯರಾವ್, ಪ್ರಮೋದ್ ಅಜ್ಜಿಬೆಟ್ಟು, ಗೋಪಾಲಸುವರ್ಣ, ದೇವಪ್ಪ ಪೂಜಾರಿ, ಮತ್ತಿತರರು ಹಾಜರಿದ್ದರು.

ಮೆರವಣಿಗೆಯ ಸಂದರ್ಭದಲ್ಲಿ ಬಂಟ್ವಾಳ ನಗರ ಠಾಣಾ ಎಸ್.ಐ.ಅವಿನಾಶ್ ಭದ್ರತೆ ವ್ಯವಸ್ಥೆ ಒದಗಿಸಿದ್ದರು.

- Advertisement -

Related news

error: Content is protected !!