ನೂತನ ಅಧ್ಯಕ್ಷರಾಗಿ ಸಂಕಪ್ಪ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ನಾರಾಯಣ ಪೂಜಾರಿ ಎಸ್ ಕೆ ನೇಮಕ



ಬಂಟ್ವಾಳ : ಬಂಟ್ವಾಳ ತಾಲೂಕು ಪಿಂಚಣಿದಾರರ ಸಂಘ, ಬಿ.ಸಿ.ರೋಡ್ ಇದರ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಬಿ.ಸಿ.ರೋಡ್ ಸರಕಾರಿ ನೌಕರರ ಭವನದಲ್ಲಿ ಸಂಘದ ಕಾರ್ಯಕಾರಿ ಸಮಿತಿ ಅಧ್ಯಕ್ಷರಾದ ಪಿ .ಲೋಕನಾಥ ಶೆಟ್ಟಿ-ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಮಿತಿಯ ನೂತನ ಅಧ್ಯಕ್ಷರಾಗಿ ಸಂಕಪ್ಪ ಶೆಟ್ಟಿ, ಉಪಾಧ್ಯಕ್ಷರಾಗಿ ಕೆ.ನಿಲೋಜಿ ರಾವ್, ಟಿ.ಶೇಷಪ್ಪ ಮಾಸ್ಟರ್, ಪ್ರಧಾನ ಕಾರ್ಯದರ್ಶಿಯಾಗಿ ನಾರಾಯಣ ಪೂಜಾರಿ ಎಸ್ ಕೆ, ಜತೆ ಕಾರ್ಯದರ್ಶಿಯಾಗಿ ನಾರಾಯಣ ಎಂ, ಖಜಾಂಚಿಯಾಗಿ ಶ್ರೀಮತಿ ಜಲಜಾಕ್ಷಿ ಕುಲಾಲ್,ಸಂಘಟನಾ ಕಾರ್ಯದರ್ಶಿಗಳಾಗಿ ಜಯರಾಮ ಪೂಜಾರಿ, ಆನಂದ ನಾಯ್ಕ್, ಜಯಂತ ಶೆಟ್ಟಿ, ಆಂತರಿಕ ಲೆಕ್ಕ ಪರಿಶೋಧಕರಾಗಿ ಪದ್ಮನಾಭ.ಎಂ ಸದಸ್ಯರುಗಳಾಗಿ ಸೋಮಪ್ಪ ಬಂಗೇರ, ಬಾಬು ಮಾಸ್ಟರ್, ಮಧುಕರ ಮಲ್ಯ, ಕೃಷ್ಣಪ್ಪ , ರಾಮಚಂದ್ರ ರಾವ್, ಜಯಾನಂದ ಪೆರಾಜೆ, ಚಂದ್ರಶೇಖರ ಗಟ್ಟಿ, ಲೋಕನಾಥ ಶೆಟ್ಟಿ, ಶ್ರೀಮತಿ ಸುಧಾ ಜೋಶಿ, ರಾಘವನ್ ನಾಯರ್ ರವನ್ನು ಆಯ್ಕೆ ಮಾಡಲಾಯಿತು.
ಕಾರ್ಯದರ್ಶಿ ನೀಲೋಜಿ ರಾವ್ ಸ್ವಾಗತಿಸಿ ಮಹಾಸಭೆಯ ವರದಿಯನ್ನು ವಾಚಿಸಿದರು .ಖಜಾಂಚಿ ಶ್ರೀಮತಿ ಜಲಜಾಕ್ಷಿ ಕುಲಾಲ್ ಲೆಕ್ಕ ಪತ್ರ ಮಂಡಿಸಿದರು .ನೂತನ ಕಾರ್ಯದರ್ಶಿ ನಾರಾಯಣ ಪೂಜಾರಿ ಎಸ್.ಕೆ ವಂದಿಸಿದರು.








